Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಸಾಂಸ್ಕೃತಿಕ ಹಬ್ಬ

ಮೈಸೂರು: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ವತಿಯಿಂದ ಡಿಸೆಂಬರ್ ನಾಲ್ಕರವರೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಗಳ ವಿವರ
ನ.30ರಂದು 7ರಿಂದ 8ಗಂಟೆವರೆಗೆ ದತ್ತಗಿರಿಯ ಅಲೆಕ್ಸಾಂಡರ್ ಅವರಿಂದ ಸುಗಮ ಸಂಗೀತ, 8 ರಿಂದ 9.30 ಗಂಟೆಯವರೆಗೆ ಶ್ರೀ ರೇಣುಕಾಂಬ ಕಲಾಸಂಘ ಬೆಂಗಳೂರಿನ ನಾಗರಾಜ ಅವರಿಂದ ನಾಟಕ, ಡಿ.1ರಂದು ಸಂಜೆ 7 ರಿಂದ 8ರವರೆಗೆ ಬಸವೇಶ್ವರ ರಸ್ತೆಯ ಎಂ.ಎನ್.ವೈಷ್ಣವಿ ಅವರಿಂದ ಸುಗಮಸಂಗೀತ, 8 ರಿಂದ 9.30 ರವರೆಗೆ ರಾಮಾನುಜ ರಸ್ತೆ ಮೈಸೂರು ರಾಘವೇಂದ್ರ ರತ್ನಾಕರ್ ಅವರಿಂದ ಚಲನಚಿತ್ರಗೀತೆ, ಡಿ.2 ರಂದು ಸಂಜೆ 7 ರಿಂದ 8ರವರೆಗೆ ಮೈಸೂರಿನ ವಿ.ನಂಜುಂಡ ಅವರಿಂದ ರಸಮಂಜರಿ, 8 ರಿಂದ 9.30ರವರೆಗೆ ಸರಸ್ವತಿ ಕೃಪಾ ಪೋಷಿತ ನಾಟಕ ಮಂಡಳಿ ಮೈಸೂರಿನ ಧ್ರುವಕುಮಾರ್ ಎಸ್. ಗೋಪಾಲ್ ಅವರಿಂದ ನಾಟಕ, ಡಿ.3ರಂದು ಸಂಜೆ 7ರಿಂದ 10ರವರೆಗೆ ಬೆಂಗಳೂರಿನ ಖ್ಯಾತ ಹಾಸ್ಯ ಸಾಹಿತಿ ಸುಧಾ ಬರಗೂರು ಅವರಿಂದ ನಗೆಹಬ್ಬ, ಡಿ.4 ರಂದು ಸಂಜೆ 7 ರಿಂದ 10ರವರೆಗೆ ಕಲ್ಪವೃಕ್ಷ ಟ್ರಸ್ಟ್ ಬೆಂಗಳೂರಿನ ಭೀಷ್ಮರಾವ್ ಅವರಿಂದ ನಾಟಕ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!