ಕೆ.ಆರ್.ನಗರ: ಮಿರ್ಲೆ ಗ್ರಾಮ ಸುಮಾರು 25 ವರ್ಷಗಳಿಂದ ಶಾಂತಿ ನೆಮ್ಮದಿಯಿಂದ ವಿಶ್ವಾಸದ ರಾಜಕಾರಣ ಮಾಡುತ್ತ ಬಂದಿದ್ದು ಗ್ರಾಮದಲ್ಲಿ ವಾಸವಿಲ್ಲದೆ ವರ್ಷಕ್ಕೆ ಒಂದು-ಎರಡು ಬಾರಿ ಬಂದು ಹೋಗುವ ಎಂ.ಹೆಚ್.ನಂದೀಶ್ ಅವರು ಶಾಸಕ ಸಾ.ರಾ.ಮಹೇಶ್ ಅವರನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಮಿರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಹೇಳಿಕೆಯಿಂದ ಗ್ರಾಮದಲ್ಲಿ ದ್ವೇಷ ಉಂಟಾಗಿ ಅಶಾಂತಿ ಎದುರಾಗುವ ಸಾಧ್ಯತೆ ಇದೆ. ಇಂತಹ ಕೀಳು ಮಟ್ಟದ ಹೇಳಿಕೆ ಸಮಾಜಕ್ಕೆ ಮಾರಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಿರ್ಲೆ ಗ್ರಾಮಕ್ಕೆ ಏನೇನು ಅಭಿವೃದ್ಧಿ ಕಾರ್ಯ ನಡೆದಿರುವ ಕಿರುಹೊತ್ತಿಗೆಯನ್ನು ಪ್ರಕಟಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಮಂಜುಳಾ, ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ, ವಿಎಸ್‌ಎಸ್‌ಎನ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮಂಜುನಾಥ್, ಹೊಸಟ್ಟಿ ರಘು, ತುಕರಾಮ್, ಪ್ರಕಾಶ್, ದಿವಕಾರ್, ನಾಗರಾಜ್, ನಾಗೇಶ್, ಮೋಹನ ಹಾಜರಿದ್ದರು.