Mysore
19
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಹುಲಿ ದಾಳಿಗೆ ಹಸು ಬಲಿ

ಕೊಡಗು : ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ಒಳಪಟ್ಟ ಹರಿಹರ ಗ್ರಾಮದ ಮರಡ ಜಗನ್ ಎಂಬವರ ಗಬ್ಬದ ಹಸುವನ್ನು ನಿನ್ನೆ ರಾತ್ರಿ ಹುಲಿ ದಾಳಿ ಮಾಡಿ ಹಸುವನ್ನು ಕೊಂದು ಹಾಕಿದೆ. ಹರಿಹರ ಭಾಗದಲ್ಲಿ ಸತ್ತತವಾಗಿ ಹುಲಿ ದಾಳಿ ಮಾಡುತ್ತಿರುವುದು, ಹಾಗೂ ಈ ಸಮಯದಲ್ಲಿ ಹುಲಿ ಕಾಡು ಬಿಟ್ಟು ನಾಡಿಗೆ ಬಂದಿರುವುದು ರೈತರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಅದು ಅಲ್ಲದೆ ಈವಾಗ ಕಾಫಿ ಫಸಲು ಕೊಯ್ಯೂಲು ರೈತರು ಕಾರ್ಮಿಕರು ತೋಟದಲ್ಲಿ ಕೆಲಸದಲ್ಲಿ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಕ್ಕೆ ಹುಲಿ ಬಂದಿರುವುದು ರೈತರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಹಾಗೆ ದಕ್ಷಿಣ ಕೊಡಗಿನ ಸುತ್ತಾ ಮುತ್ತ ಒಬ್ಬರೆ ಓಡಾಡಲು ಕೂಡ ಜನತೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಕೂತೂರು ಕಾಲೋನಿಯ ಕಾರ್ಮಿಕನ ಮೇಲೆ ದಾಳಿಮಾಡಿ ಕೊಂದು ಹಾಕಿತ್ತು. ಇದೀಗ ಮತ್ತೆ ಅದೇ ಭಾಗದಲ್ಲಿ ಹುಲಿ ದಾಳಿ ನಡೆಸುತ್ತಿದ್ದು ಜ‌ನತೆ ಆತಂಕದಲ್ಲೆ ಕಾಲ‌ ಕಳೆಯುವಂತಾಗಿದೆ. ಹಿಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲ್ಲಿಹಾವಳಿ ಸಮಸ್ಯೆಗೆ ಪರಿಹಾರ ನೀಡುವಂತೆ ಹಾಗೂ ಹುಲಿದಾಳಿಗೆ ಬಲಿಯಾದ ಜಾನುವಾರುವಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ‌.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!