Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಕೊಡುಗೆ ಅಪಾರವಾದುದು: ಪರಿಮಳ ನಾಗಪ್ಪ

ಹನೂರು : ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗಡೆ ಹಾಗೂ ಅವರ ಧರ್ಮಪತ್ನಿ ಮಾತೃ ಶ್ರೀ ಡಾ.ಹೇಮಾವತಿ ವಿ.ಹೆಗಡೆ ಅವರ ಕೊಡುಗೆ ಅಪಾರ. ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಮೂಲಕ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಮಾಜಿ ಶಾಸಕಿ ಪರಿಮಳ ನಾಗಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಆರ್ ಎಸ್ ದೊಡ್ಡಿ ಗ್ರಾಮದಲ್ಲಿ ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಶ್ವತ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ಹನೂರು ಬಿ ವಲಯದ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧನ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳ ಎಂಬ ಈ ಹೆಸರಿನಲ್ಲಿ ಶಕ್ತಿ ಇದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಹೆಣ್ಣು ಗೌರವಯುತ ಹಾಗೂ ಸ್ವಾಭಿಮಾನತೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಿದ್ದಾರೆ. ದೇಶಾದ್ಯಂತ ಇಂತಹ ಕೆಲಸ ಆಗಬೇಕು. ಯೋಜನೆ ವತಿಯಿಂದ ಕುಡಿತ ಬಿಡಿಸುವ ಕಾರ್ಯಕ್ರಮವನ್ನು ಕೈಗೊಂಡಿರುವುದು ಶ್ಲಾಘನೀಯ ವಿಚಾರ. ಹನೂರು ಭಾಗದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ತಿಳಿಸಿದರು. ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ ಮಾತನಾಡಿ, ಒಳ್ಳೆಯ ಸದುದ್ದೋಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅನುಕೂಲಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಜಿಲ್ಲೆಯಲ್ಲಿ 16 ಸಾವಿರ ಸಂಘಗಳಿದ್ದು 1ಲಕ್ಷದ 26ಸಾವಿರ ಸದಸ್ಯರಿದ್ದಾರೆ. ನೀವು ಕಟ್ಟಿರುವ 10ರೂ ಉಳಿತಾಯ ಇಂದು 200 ಕೋಟಿ ಆಗಿದೆ.
ನೀವು ಪಡೆದುಕೊಂಡ ಪ್ರಗತಿ ನಿಧಿಯನ್ನು ನೀವೇ ಬಳಕೆ ಮಾಡಿ ಉತ್ತಮ ರೀತಿಯಲ್ಲಿ ನಿಮ್ಮ ಕುಟುಂಬದ ಜವಾಬ್ದಾರಿ ನಿರ್ವಹಣೆ ಮಾಡಿ. ಪೋಷಕರು ತಮ್ಮ ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡಬೇಡಿ, ಗಂಡು-ಹೆಣ್ಣು ಎಂಬ ಭೇದ ಮಾಡದೆ ಉತ್ತಮ ಶಿಕ್ಷಣವನ್ನು ನೀಡಿ ಎಂದು ತಿಳಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ ಆರ್ ಮಂಜುನಾಥ್ ಮಾತನಾಡಿ ಧರ್ಮಸ್ಥಳ ಸಂಘವು ಸರ್ಕಾರ ಮಾಡುವ ಕೆಲಸಗಳನ್ನು ಸರ್ಕಾರೇತರ ಸಂಸ್ಥೆಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮಾಡುತ್ತಿದೆ ಇದಲ್ಲದೆ ಕೃಷಿ, ಶಿಕ್ಷಣ, ಅರೋಗ್ಯ, ವಿದ್ಯಾರ್ಥಿಗಳಿಗೆ ಸಹಾಯಧನ ನಿರ್ಗತಿಕರಿಗೆ, ಸಹಾಯ ನೀಡುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು. ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂಘದ ಪದಾಧಿಕಾರಿಗಳ ಕುಟುಂಬದ ವಿಶೇಷ ಚೇತನರಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾ ನಿರ್ದೇಶಕ ಪ್ರವೀಣ್, ಮೇಲ್ವಿಚಾರಕ ಕೃಷ್ಣ, ಜಿಲ್ಲಾ ಜನಜಾಗ್ರತ ಸದಸ್ಯ ಪ್ರಕಾಶ್ ನಾಯ್ಡು, ಪಪಂ ಸದಸ್ಯ ಆನಂದ್ ಕುಮಾರ್, ತಾಲೂಕು ನೋಡಲ್ ಅಧಿಕಾರಿ ಶೇಖರ್, ಒಕ್ಕೂಟದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸದಸ್ಯರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ