ಮೈಸೂರು: ಗಂಗೋತ್ರಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯ ನಿರ್ಮಿಸಿಕೊಡುವಂತೆ ಸಂಸದ ಪ್ರತಾಪ್ ಸಿಂಹ, ಜೆ.ಕೆ.ಟೈರ್ಸ್ ಕಂಪೆನಿಗೆ ಮನವಿ ಮಾಡಿದ್ದು, ಕಂಪೆನಿಯ ಮೈಸೂರಿನ ಘಟಕದ ಮುಖ್ಯಸ್ಥರಾದ ಈಶ್ವರ್ ಅವರ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಸಂಸದರು, ಕಂಪೆನಿಯ ಸಿಎಸ್‌ಆರ್ ನಿಧಿಯಲ್ಲಿ ಕೂಡಲೇ ಹೊಸ ಶೌಚಾಲಯ ನಿರ್ಮಾಣ ಮಾಡುವ ಭರವಸೆ ನೀಡಿದರು.
ಗಂಗೋತ್ರಿ ಶಾಲೆಯಲ್ಲಿ ಒಟ್ಟು 380 ವಿದ್ಯಾರ್ಥಿಗಳಿದ್ದು, ಎರಡು ಶೌಚಾಲಯಗಳು ಮಾತ್ರ ಇದೆ. ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಹಾಸ್ಟೆಲ್ ಬ್ಲಾಕ್ ೧ರಲ್ಲಿನ ಶೌಚಾಲಯಗಳು ಸೋರಿಕೆ ಸಮಸ್ಯೆಗಳಿಂದ ಕೂಡಿದೆ. ಈ ಶೌಚಾಲಯಗಳನ್ನು ಪ್ರತಿದಿನ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳಸುತ್ತಿದ್ದು, ತಕ್ಷಣ ನವೀಕರಣ ಅಗತ್ಯವಿದೆ. ಹಾಸ್ಟೆಲ್‌ಗೆ ಟೇಬಲ್, ಚೇರ್‌ಗಳು ಮತ್ತು ಉತ್ತಮ ಬೆಳಕಿನ ಸೌಲಭ್ಯದೊಂದಿಗೆ ಅಧ್ಯಯನ ಕೊಠಡಿ. ಅಲ್ಲದೇ ಸಂಶೋಧಕರಿಗೆ 60 ಲ್ಯಾಪ್‌ಟಾಪ್‌ಗಳನ್ನು ಒದಗಿಸುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ಕುವೆಂಪು ಅವರ ಕಾಲದಲ್ಲಿ ಆರಂಭವಾದ ಕುವೆಂಪು ಸ್ಕೂಲ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಸಂಶೋಧನಾ ಮತ್ತು ಪಿ.ಜಿ. ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಶೌಚಾಲಯ ಮತ್ತು ಸ್ನಾನಗೃಹ ಕೊರತೆಯಿಂದ ತೀವ್ರ ತೊಂದರೆ ಆಗುತ್ತಿದೆ ಎಂದು ಸಿಂಡಿಕೇಟ್ ಸದಸ್ಯೆ ಡಾ. ಚೈತ್ರಾ ನಾರಾಯಣ್ ರವರು ಸಂಸದ ಪ್ರತಾಪ್ ಸಿಂಹ ಅವರ ಗಮನಕ್ಕೆ ತಂದಿದ್ದರು.





