ಮೈಸೂರು: ಮೈಸೂರಿನ ದೇವನೂರು ಕೆರೆಯಲ್ಲಿ ರಸ್ತೆ ಕಾಮಗಾರಿ ನಿರ್ಮಾಣ. ಸೂರ್ಯ ನಾರಾಯಣ ದೇವಸ್ಥಾನ ಮುಖ್ಯರಸ್ತೆಯಿಂದ ಮತ್ತೊಂದು ಕಡೆಗೆ ಹೋಗುವ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಲಾಗಿದೆ.
ಕೆರೆಯ ಒಂದು ಭಾಗವನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ. ಸ್ಥಳಕ್ಕೆ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಗಿರಿಧರ್ ಅವರು ಭೇಟಿ ನೀಡಿದಾಗ ಪೊಲೀಸರು ಕಾನೂನಿನ ಪ್ರಕಾರ ಮಾಡಬೇಕು. ನೀವು ವಾದ ಮಾಡಬಾರದು ಎಂದು ಹೇಳಿದಾಗ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.





