ಮೈಸೂರು: ಚಾಮರಾಜ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
ಮಹಾತ್ಮ ಗಾಂಧಿ ನಗರವಿಕಾಸ ಯೋಜನೆ ಅನುದಾನ ೪೦ ಲಕ್ಷ ರೂ.ಕುಕ್ಕರಹಳ್ಳಿಯ ವಿವಿಧ ರಸ್ತೆ ಮತ್ತು ಚರಂಡಿ ನಿರ್ಮಾಣ, ೧೫ನೇ ಹಣಕಾಸು ಯೋಜನೆಯಡಿ ಜಯಲಕ್ಷ್ಮಿಪುರಂ ೪ನೇ ಮೇನ್ ನಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿರುವ ಜಲಸಂಗ್ರಹಾಗಾರ ನಿವೇಶನದಲ್ಲಿ ನಗರ ಪಾಲಿಕೆಯಿಂದ ಕೈಗೊಂಡಿರುವ ೨.೯೦ ಕೋಟಿ ರೂ.ಭೂ ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.
ನಗರ ಪಾಲಿಕೆ ಸದಸ್ಯರಾದ ವೇದಾವತಿ, ಭಾಗ್ಯ ಮಾದೇಶ್, ನಗರಪಾಲಿಕೆ ಉಪ ಆಂಕ್ತ (ಅಭಿವೃದ್ದಿ) ಮಹೇಶ್, ಅಭಿವೃದ್ದಿ ಅಧಿಕಾರಿ ಹೇಗಾನಂದ, ಕ್ಷೇತ್ರದ ಬಿಜೆಪಿ ಪ್ರಧಾನ ಕಾಂದರ್ಶಿ ಪುನೀತ್, ನಗರ ಪಾಲಿಕೆ ಮಾಜಿ ಸದಸ್ಯ ರಮೇಶ್, ಮುಖಂಡರಾದ ಶಿವಶಂಕರ್, ನವೀನ, ಚಲುವ, ಅಂದಾನಿ, ನಾರಾಂಣ, ಶಿವಣ್ಣ, ಪುರುಷೋತ್ತಮ, ಮಹದೇವು, ಸುನಿಲ್, ಮಾದೇಶ್, ನಂಜುಂಡಸ್ವಾಮಿ ಮುಂತಾದವರು ಹಾಜರಿದ್ದರು.





