ಮೈಸೂರು : ಇಲ್ಲಿನ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಹಿರಿಯ ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್ ಅವರ ನಿಧನದ ಪ್ರಯುಕ್ತ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಹೆಚ್. ಜಿ. ಕೃಷ್ಣಪ್ಪ ಅವರು ಪ. ಮಲೇಶ್ ಅವರ ಹೋರಾಟದ ಬದುಕು, ಅವರಿಗಿದ್ದ ಮಕ್ಕಳ ಮೇಲಿನ ಮಮತೆ , ಪ್ರೀತಿ – ಕಾಳಜಿ, ಶಾಲೆಯ ಬಗ್ಗೆ ಅವರಿಗಿದ್ದ ಒಡನಾಟ ಕುರಿತು ಮಾತನಾಡಿದರು. ನಂತರ ದಿವಂಗತ ಪ.ಮಲ್ಲೇಶ್ ಅವರಿಗೆ ಮೌನಾಚರಣೆ ಮಾಡುವುದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸ ರ ಸುದರ್ಶನ , ಆಡಳಿತ ಮಂಡಳಿಯ ಸದಸ್ಯರು , ಶಾಲಾ-ಕಾಲೇಜಿನ ಸಿಬ್ಬಂದಿ ವರ್ಗ, ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.
ನೃಪತುಂಗ ಕನ್ನಡ ಶಾಲೆಯಲ್ಲಿ ಪ.ಮಲ್ಲೇಶ್ ಅವರಿಗೆ ಸಂತಾಪ





