ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುವ ಚಿರತೆ; ಬೃಂದಾವನಕ್ಕೆ ಪ್ರವಾಸಿಗರಿಗೆ ನಿಷೇಧ
-ವರದಿ: ಮೋಹನ್ ಬಿ.ಟಿ.
ಮಂಡ್ಯ: ಪ್ರಸಿದ್ಧ ಪ್ರವಾಸಿ ತಾಣ ಕೆ.ಆರ್.ಎಸ್.ನಲ್ಲಿ ಆಗಿಂದಾಗ್ಗೆ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿರುವ ಹಿನ್ನೆಲೆಯಲ್ಲಿ ಬೃಂದಾವನ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಅರಣ್ಯ ಇಲಾಖೆಯವರು ಚಿರತೆಯು ಎಲ್ಲಿ ಅಡಗಿದೆ ಎಂದು ಪತ್ತೆ ಹಚ್ಚಲಾಗದ ಹಿನ್ನೆಲೆಯಲ್ಲಿ ಬೃಂದಾವನದಲ್ಲಿರುವ ಪೊದೆಗಳನ್ನು ತೆರವು ಮಾಡಲಾಗುತ್ತಿದೆ.
ಕಳೆದ ಎರಡು ವಾರಗಳಿಂದ ಚಿರತೆಯು ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್.ನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಭಯಭೀತರಾಗಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಮತ್ತ ದಕ್ಷಿಣ ಭಾಗದಲ್ಲಿ ಮೂರು ಬೋನುಗಳನ್ನು ಇಡಲಾಗಿದೆ ಎಂದು ಇಇ ಪತ್ರಿಕೆಗೆ ತಿಳಿಸಿದ್ದಾರೆ.





