Mysore
28
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಕುಂಚ ಹಿಡಿದು ಗಂಧದ ಗುಡಿಯ ಚಿತ್ತಾರ ಬಿಡಿಸಿದ ಚಿಣ್ಣರು

ಮೈಸೂರು: ಗಂಧದ ಗುಡಿಯ ಬಗೆ ಬಗೆ ಸೊಬಗನ್ನು ಕುಂಚ ಹಿಡಿದು ಚಿತ್ತಾರ ಬಿಡಿಸಲು ಮಕ್ಕಳು ಸಜ್ಜಾಗಿದ್ದರು. ತಮ್ಮ ಕಲ್ಪನೆಯಲ್ಲಿ ಮರ, ಗಿಡ, ಬೆಟ್ಟ, ಗುಡ್ಡ, ಪರಿಸರಕ್ಕೆ ಬಣ್ಣ ಬಳಿಯುತ ಚಿತ್ತಾರ ಮೂಡಿಸಿದರು.

ನಗರದ ದಸರಾ ವಸ್ತು ಪ್ರದರ್ಶನದ ಪ್ರಾಧಿಕಾರದ ಪಿ.ಕಾಳಿಂಗ ರಾವ್ ಆವರಣದಲ್ಲಿ ಪುನೀತ್ ರಾಜ್ ಕುಮಾರ್ ಅವರ ಸ್ಮರಣೆಯ ಅಂಗವಾಗಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ ಗಂಧದ ಗುಡಿ ಪರಿಕಲ್ಪನೆಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯ ದೃಶ್ಯವಿದು.

ನಗರದ ನಾನಾ ಭಾಗಗಳಿಂದ ಆಗಮಿಸಿದ್ದ 829 ಮಕ್ಕಳು ವಯಸ್ಸಿನ ಅಂತರದಲ್ಲಿ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಪರಿಸರ ಕುರಿತಂತೆ ತಮ್ಮದೇ ನಾನಾ ಪರಿಕಲ್ಪನೆಗಳು ಹೊರಹೊಮ್ಮಿದವು.

ತಮ್ಮ ಸುತ್ತಮುತ್ತ ಕಂಡಂತಹ ಪರಿಸರ, ಜಲಪಾತ, ಕಾಡು, ಹಸಿರು, ಬೆಟ್ಟಗುಡ್ಡ, ಗಿಡಮರಗಳಿಗೆ ಬಣ್ಣ ಹಚ್ಚಿ ಪರಿಸರ ಕಥೆಗಳ ಚಿತ್ತಾರ ಮೂಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!