Mysore
21
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಹೆಣ್ಣು ಮಕ್ಕಳ ಮನಸ್ಸು ಮುಗ್ದವಾದದ್ದು ಅವರನ್ನು ಗೌರವದಿಂದ ಕಾಣಿ : ಮಕ್ಕಳ ಸಮಿತಿ ಅಧ್ಯಕ್ಷೆ ಕಮಲಾ

ಮೈಸೂರು : ಚೈಲ್ಡ್ ಲೈನ್ -1098 ಮೈಸೂರು ವತಿಯಿಂದ “ಅಂತರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ” ಯನ್ನು ವಾಣಿವಿಲಾಸ ಬಾಲಕಿಯರ ಪ್ರೌಢಶಾಲೆಯಲ್ಲಿ  ಆಚರಿಸಲಾಯಿತು.

ಕಾರ್ಯಕ್ರಮವನ್ನು ಅಧಿಕಾರಿಗಳು ಮತ್ತು ಮಕ್ಕಳು ಡ್ರಮ್ ಬಾರಿಸುವ ಮೂಲಕ ಉದ್ಘಾಟಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕಮಲಾ ಮಾತನಾಡಿ ಇಂದಿಗೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾಧನಿಯವಾಗಿದೆ. ಮಕ್ಕಳ ಮನಸ್ಸು ಮುಗ್ದವಾದದ್ದು ಅವರನ್ನು ಗೌರವದಿಂದ ಕಾಣಬೇಕು. ಈ ದಿನದಂದು ಶಿಕ್ಷಣ, ಪೋಷಣೆ, ಬಲವಂತದ ಬಾಲ್ಯವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಹಕ್ಕುಗಳಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಹುಡುಗಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ ಎಂದು ತಿಳಿಸಿದರು.

ಚೈಲ್ಡ್ ಲೈನ್ ನೋಡಲ್ ಸಂಯೋಜಕರಾದ ಶ್ರೀ ಧನರಾಜ್ ಚೈಲ್ಡ್ ಲೈನ್-1098 ಮತ್ತು ಮಕ್ಕಳ ಹಕ್ಕುಗಳ ಕುರಿತು ತಿಳಿಸಿದರು. ಶ್ರೀಮತಿ ವೈಶಾಲಿ ಬಿರಾದರ್, ಸಹಾಯಕ ಪೊಲೀಸ್ ಅಧಿಕಾರಿಗಳು, ನಜರಬಾದ ಪೊಲೀಸ್ ಠಾಣೆ ರವರು ಮಾತನಾಡಿ ಅಂತರರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ, ಹದಿಹರೆಯದ ಹುಡುಗಿಯರಿಗೆ ಸಂಬಂಧಿಸಿದ ವಿಷಯಗಳ ಮೇಲೆ ಹೆಚ್ಚಿನ ಗಮನ, ಹೂಡಿಕೆ ಮತ್ತು ಕ್ರಮಕ್ಕಾಗಿ ಸಾಮೂಹಿಕವಾಗಿ ಕರೆ ನೀಡುವ ಉದ್ದೇಶದಿಂದ, ನ್ಯಾಯಯುತವಾದ ಪಾಲನೆ ಮತ್ತು ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಮಾಡಲಾಗುತ್ತಿದೆ. ಪೊಲೀಸ್ ಎಂದರೆ ಭಯವಲ್ಲ ಭರವಸೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಅನ್ನಪೂರ್ಣ ಶಾಲೆಯ ಮುಖ್ಯ ಶಿಕ್ಷಕಿ ವಹಿಸಿದ್ದರು. ಕಾರ್ಯಕ್ರಮದಲ್ಲಿ RLHP ಚೈಲ್ಡ್ ಲೈನ್ ಸಂಯೋಜಕರಾದ ಶಶಿಕುಮಾರ್, ಶ್ರೀಮತಿ ಶೀಲಾ ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕ, ಮೈಸೂರು ನಗರ, ಶ್ರೀಮತಿ ಚೈತ್ರ ಪೊಲೀಸ್ ಸಿಬ್ಬಂದಿ, ಮಕ್ಕಳ ಪ್ರತಿನಿಧಿಗಳಾದ ಕು.ಚೈತನ್ಯ, ಕು.ಪ್ರಿಯದರ್ಶಿನಿ, ಶಾಲೆಯ ಶಿಕ್ಷಕರು, ಮಕ್ಕಳು ಚೈಲ್ಡ್ ಲೈನ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!