ಮೈಸೂರು ಜಿಲ್ಲೆಯಲ್ಲಿ ಕಳೆದ ಕೆಲ ವಾರಗಳಿಂದ ಚಿರತೆ ಹಾಗೂ ಹುಲಿ ದಾಳಿಯ ಸುದ್ದಿಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದೀಗ ಹಾಸನದಲ್ಲಿಯೂ ಸಹ ಚಿರತೆ ದಾಳಿ ನಡೆಸಿದ ಘಟನೆಯೊಂದು ವರದಿಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾವಿನಹಳ್ಳಿಯಲ್ಲಿ ಚಿರತೆ ನಾಲ್ಕು ಹಸುಗಳ ಮೇಲೆ ದಾಳಿ ನಡೆಸಿದೆ.
ಈ ಪರಿಣಾಮ ಒಂದು ಹಸು ಸಾವನ್ನಪ್ಪಿದ್ದು, ಮೂರು ಹಸುಗಳು ಗಂಭೀರವಾಗಿ ಗಾಯಗೊಂಡಿವೆ. ಇನ್ನು ಒಂದು ವಾರದಲ್ಲಿಯೇ ಚಿರತೆ ಒಟ್ಟು ಆರು ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಸ್ಥಳೀಯರು ಇದರ ಕುರಿತು ಆತಂಕ ಹೊರಹಾಕಿದ್ದಾರೆ.
ಬೇರೆಡೆ ಸೆರೆಹಿಡಿದ ಚಿರತೆಯನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪವನ್ನು ಮಾಡಿದ್ದು, ಕೂಡಲೇ ಚಿರತೆಯನ್ನು ಸೆರೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಗ್ರಾಮದ ಸುತ್ತ ಮುತ್ತ ಬೋನುಗಳನ್ನು ಇರಿಸಲಾಗಿದ್ದರೂ ಸಹ ಚಿರತೆ ಸೆರೆ ಮಾತ್ರ ಬೋನಿಗೆ ಬೀಳದೇ ಇರುವುದು ಜನರ ನಿದ್ದೆಗೆಡಿಸಿದೆ.