ಮೈಸೂರು : ರಾಮಕೃಷ್ಣನಗರದಲ್ಲಿನ ಕೆ ಬ್ಲಾಕ್ ನಟನ ರಂಗಶಾಲೆಯಲ್ಲಿ ಇದೇ ಭಾನುವಾರದಂದು ಬೆಳಿಗ್ಗೆ 10.30 ಕ್ಕೆ 5 ಛಂದ ಪುಸ್ತಕಗಳು ಮಂಡ್ಯ ರಮೇಶ್ ರವರ ಸಹಕಾರದೊಂದಿಗೆ ಬಿಡುಗಡೆಗೊಳ್ಳಲಿವೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ.ಓ ಎಲ್.ನಾಗಭೂಷಣ ಸ್ವಾಮಿ ಹಾಗೂ ದಾದಾಪೀರ್ ಜೈಮನ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕುಸುಮಾ ಆಯರಹಳ್ಳಿ, ದರ್ಶನ್ ಜಯಣ್ಣ, ಪ್ರೀತಿ ನಾಗರಾಜ, ಜಯಶ್ರೀ ಭಟ್, ವಿಕ್ರಮ ವಿಸಾಜಿ ಉಪಸ್ಥಿತಿ ವಹಿಸಲಿದ್ದಾರೆ.

ಅಂದು ಬಿಡುಗಡೆಗೊಳ್ಳಲಿರುವ ಪುಸ್ತಕಗಳು :
ಕುಸುಮಾ ಆಯರಹಳ್ಳಿ ಅವರ ಕಾದಂಬರಿ “ದಾರಿ”
ದರ್ಶನ್ ಜಯಣ್ಣ ಬರೆದ ಅವರ ತಂದೆಯ ಕತೆ “ಅಪ್ಪನ ರ್ಯಾಲೀಸ್ ಸೈಕಲ್”
ಪ್ರೀತಿ ನಾಗರಾಜ ಅವರು ಅನುವಾದಿಸಿರುವ, ಮಾರ್ಜಾನ್ ಸತ್ರಪಿ ಅವರ ಗ್ರಾಫಿಕ್ ಕಾದಂಬರಿ “ಪರ್ಸೆಪೊಲಿಸ್”
ಜಯಶ್ರೀ ಭಟ್ ಅನುವಾದಿಸಿರುವ, ಈಡಿತ್ ಎಗರ್ ಆತ್ಮಕತೆ “ದಿ ಚಾಯ್ಸ್ ”
ವಿಕ್ರಮ ವಿಸಾಜಿ ಅನುವಾದಿಸಿರುವ, ಗರಿಮಾ ಶ್ರೀವಾಸ್ತವ ಅವರ ಪ್ರವಾಸ ಕಥನ ” ದೇಹವೇ ದೇಶ”





