Mysore
29
haze

Social Media

ಗುರುವಾರ, 26 ಫೆಬ್ರವರಿ 2026
Light
Dark

ಲಾಡ್ಜ್​ನಲ್ಲಿ ನೇಣು ಬಿಗಿದುಕೊಂಡು ಗ್ರಾಪಂ‌ ಸದಸ್ಯ ಸಾವಿಗೆ ಶರಣು

ಚಾಮರಾಜನಗರ: ಗ್ರಾಮ ಪಂಚಾಯತಿ ಸದಸ್ಯನೋರ್ವ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ  ಘಟನೆ ಕೊಳ್ಳೇಗಾಲದಲ್ಲಿರುವ ಲಾಡ್ಜ್ ನಲ್ಲಿ ನಡೆದಿದೆ.

ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಮಣಿಕಂಠನಾಯಕ(34) ಆತ್ಮಹತ್ಯೆ ಮಾಡಿಕೊಂಡಿರುವ ಗ್ರಾಪಂ ಸದಸ್ಯ. ಡಿಸೆಂಬರ್​ 3ರಂದು ಲಾಡ್ಜ್ ನಲ್ಲಿ ರೂಂ ಮಾಡಿಕೊಂಡು ವಾಸ್ತವ್ಯ ಹೂಡಿದ್ದ ಮಣಿಕಂಠನಾಯಕ ಸೋಮವಾರ ತಡರಾತ್ರಿ ಲಾಡ್ಜ್ ನಲ್ಲಿ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಆತ್ಮಹತ್ಯೆಗೆ ಕಾರಣ ಏನು ಎಂಬುದರ ಕುರಿತು ತಿಳಿಯಲು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!