ಚಾಮರಾಜನಗರ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಅಂಕಶೆಟ್ಟಿಪುರದಲ್ಲಿ ಮನೆಗಳು ಹಾನಿಯಾಗಿದ್ದು, ಗ್ರಾಮಕ್ಕೆ ಬಿಜೆಪಿ ರೈತ ಮುಖಂಡ ಮಲ್ಲೇಶ್ ಅವರು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಮಳೆಯಿಂದ ಮನೆಗಳಲ್ಲಿ ನೀರು ತುಂಬಿಕೊoಡಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. ಮನೆಯ ಒಳಗಡೆ ವಾಸವಿರಲು ಭಯ ಪಡುತ್ತಿದ್ದು ಕನಿಷ್ಠ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಈ ಎಲ್ಲವನ್ನು ವೀಕ್ಷಿಸಿದರು.
ಮನೆ ಹಾಗೂ ಗೋಡೆ ಕುಸಿತಗೊಂಡು ತೊಂದರೆಗೆ ಒಳಗಾದ ಗ್ರಾಮಸ್ಥರನ್ನು ಭೇಟಿ ಮಾಡಿ ಅವರಿಗೆ ತಲಾ ೫ ಸಾವಿರ, ೧೦ ಸಂತ್ರಸ್ತರಿಗೆ ೫೦ ಸಾವಿರ ರೂ. ನೆರವು ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಶನಿವಾರ ನಗರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣ ಆಗಮಿಸಲಿದ್ದಾರೆ. ಅವರೊಡನೆ ಈ ಸಂಬoಧ ಚರ್ಚಿಸಿ ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮಣ್ಣ, ಉಮೇಶ್, ಮಹಾದೇವಸ್ವಾಮಿ, ಶಿವಣ್ಣ, ಕೊತ್ತಲವಾಡಿ ಕುಮಾರ್, ಅರಕಲವಾಡಿ ಮಹೇಶ್, ಕಟ್ನವಾಡಿ ಸುಭಾಷ್ ಪಟೇಲ್ ಇತರರಿದ್ದರು.





