ಚಾಮರಾಜನಗರ: ವೀಕೆಂಡ್ ಖುಷಿಯಲ್ಲಿದ್ದ ಪ್ರವಾಸಿಗರು ಅರ್ಧ ತಾಸು ಯಮ ದರ್ಶನ ಕಂಡು ಬಳಿಕ ಬದುಕಿದೆ ಬಡಜೀವ ಎಂಬಂತೆ ಪಾರಾಗಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಕಾವೇರಿ ನದಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಐವರು ಭರಚುಕ್ಕಿ ಜಲಪಾತಕ್ಕೆ ಬಂದಿದ್ದರು. ಅದಾದ ಬಳಿಕ ಶಿವನಸಮುದ್ರ ಮಧ್ಯರಂಗನಾಥ ದೇವಸ್ಥಾನದ ಹಿಂಭಾಗದ ವಿದ್ಯುತ್ ಉತ್ಪಾದನೆ ಕೇಂದ್ರಕ್ಕೆ ನೀರು ಒದಗಿಸುವ ಸ್ಥಳದಲ್ಲಿ ಕುಳಿತಿದ್ದಾಗ ಯಮ ದರ್ಶನವನ್ನೇ ಕಂಡು ಪಾರಾಗಿ ಬಂದಿದ್ದಾರೆ.
ನೀರಿನಲ್ಲಿ ಆಟವಾಡಲು ಕುಟುಂಬ ಸಮೇತ ಜೀರೋ ಪಾಯಿಂಟ್‌ನ ನೀರು ಹರಿಯುವ ಬಂಡೆಗಳ ಮೇಲೆ ಹೋಗಿದ್ದಾರೆ. ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಶೇಖರಿಸಿದ್ದ ನೀರನ್ನು ದಿಢೀರನೇ ನದಿಗೆ ಬಿಟ್ಟ ಪರಿಣಾಮ ದಡಕ್ಕೆ ಬರಲಾಗದೇ ಬಂಡೆಗಳ ನಡುವೆ ಸಿಲುಕಿದ್ದಾರೆ. ಅಪಾಯದ ಮುನ್ಸೂಚನೆ ಎಂದು ತಿಳಿದು ತೆಪ್ಪ ನಡೆಸುವವರು ನಡುನೀರಿನಲ್ಲಿ ಇದ್ದವರನ್ನು ದಡಕ್ಕೆ ಕರೆತಂದು ಪಾರು ಮಾಡಿದ್ದಾರೆ.