ಯಳಂದೂರು: ಪ್ರೀತಿಸಿ ಮದುವೆಯಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ತಾಲೂಕಿನ ಯರಿಯೂರು ಗ್ರಾಮದಲ್ಲಿ ನಡೆದಿದೆ.
ಯರಿಯೂರು ಗ್ರಾಮದ ಪುಟ್ಟಸ್ವಾಮಿ ಹಾಗೂ ವಿನಾಯಕ ಎಂಬ ಎರಡು ಕುಟುಂಬದವರೇ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು.
ಗ್ರಾಮದ ನಿವಾಸಿ ರವಿಕುಮಾರ್ ಎಂಬುವವರ ಸಹೋದರ 10 ವರ್ಷದಿಂದ ಓಡಿ ಹೋಗಿ ಮದುವೆ ಆಗಿದ್ದಾರೆ. ಇದಕ್ಕೆ ಗ್ರಾಮದ ಮುಖಂಡರು ಸುಮಾರು 50 ಸಾವಿರದಿಂದ 1 ಲಕ್ಷದವರೆಗೂ ದಂಡ ನೀಡುವಂತೆ ಒತ್ತಾಯಿಸಿದ್ದಾರೆ. ಕೊಡಲು ನಿರಾಕರಿಸಿದ್ದಕ್ಕಾಗಿ ಬಹಿಷ್ಕಾರ ಹಾಕಲಾಗಿದೆ ಎಂದು ದೂರಿದ್ದಾರೆ.
ಸುಮಾರು 3-4 ವರ್ಷಗಳಿಂದಲೂ ಬಹಿಷ್ಕಾರಕ್ಕೆ ಒಳಗಾಗಿ ನರಕಯಾತನೆ ಅನುಭವಿಸುತ್ತಿದ್ದು, ಬಹಿಷ್ಕಾರ ತೆಗೆದು ಹಾಕುವಂತೆ ಎಸ್‌ಪಿ ಡಾ.ಬಿ.ಟಿ ಕವಿತಾ ಅವರುಗೆ ದೂರು ನೀಡಲಾಗಿದೆ ಎಂದಿದ್ದಾರೆ.





