ಗುಂಡ್ಲುಪೇಟೆ : ಕಾರಿನಲ್ಲಿ ಹೋಗುತ್ತಿದ್ದವರ ಮೇಲೆ ಕಾಡಾನೆ ದಾಳಿಗೆ ಯತ್ನಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ-ಕೇರಳ ಮಾರ್ಗದಲ್ಲಿ ಜರುಗಿದೆ.
ಕಾರು ಬಂಡೀಪುರ ಕಾಡಿನ ಮಧ್ಯೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿಗೆ ಓಡೋಡಿ ಬಂದಿದೆ.
ಈ ವೇಳೆ ಕಾರಿನ ಚಾಲಕ ಚೋರಾಗಿ ಹಾರ್ನ್ ಮಾಡಿದ್ದಾರೆ. ಬಳಿಕ ಸೌಂಡ್‌ಗೆ ಹೆದರಿ ಆನೆ ಓಡಿ ಹೋಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ.





