Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಕುಡಿಯುವ ನೀರು ಪೂರೈಕೆಗೆ ಗ್ರಾಮಸ್ಥರಿದ ರಾತ್ರೋರಾತ್ರಿ ಪ್ರತಿಭಟನೆ !

ಚಾಮರಾಜನಗರ: ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ನಗರದ ರಾಮಸಮುದ್ರ ೨೭ನೇ ವಾರ್ಡಿನ ಹೊಸ ಬಡಾವಣೆಯ ನಿವಾಸಿಗಳು ಸೋಮವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.

ವಾರದಿಂದಲ್ಲೂ ಸಮರ್ಪಕವಾಗಿ ನೀರು ಬರುತ್ತಿಲ್ಲ. ನಗರಸಭೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ನೀರು ಸರಬರಾಜು ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಚಿಗುರು ಬಂಗಾರು ಹಾಗೂ ಚಂದ್ರಮ್ಮ ಎಚ್ಚರಿಸಿದರು.

ಚಿಕ್ಕಮಹದೇವಮ್ಮ, ಜಯಮ್ಮ, ರೇವಮ್ಮ, ಭಾಗ್ಯಮ್ಮ, ನಾಗಮ್ಮ, ಸಾವಿತ್ರಮ್ಮ, ವೆಂಕಟೇಶ್,ಪ್ರಶಾಂತ್, ರಾಜೇಂದ್ರ, ಮಹದೇವಮ್ಮ, ಶಿವರಾಜ್ ಮೊದಲಾದವರು ಖಾಲಿ ಕೊಡಗಳನ್ನು ಪ್ರದರ್ಶಿಸಿದರು

Tags: