Mysore
20
overcast clouds
Light
Dark

ಚಾಮರಾಜನಗರದ ವರನಟ ಡಾ.ರಾಜ್‌ ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ

ಚಾಮರಾಜನಗರ: ವರನಟ ಡಾ.ರಾಜ್‌ ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ 2022ರಲ್ಲಿ 6.5 ಕೋಟಿ ರೂ ವೆಚ್ಚದಲ್ಲಿ ವರನಟ ಡಾ.ರಾಜ್‌ ಕುಮಾರ್‌ ರಂಗಮಂದಿರ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿ ಕಲಾ ಪ್ರದರ್ಶನಕ್ಕೆ ಯಾವುದೇ ಮೂಲಭೂತ ಸೌಕರ್ಯ ಇಲ್ಲ. ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ರಂಗಮಂದಿರದಲ್ಲಿ ಸೌಲಭ್ಯಗಳಿಲ್ಲದೇ ಕಳೆಗುಂದಿದಂತೆ ಕಾಣುತ್ತಿದೆ.

ರಂಗಮಂದಿರಲ್ಲಿ ಪ್ರಮುಖವಾಗಿ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆ ಇರಬೇಕು. ಇದರ ಜೊತೆ ಜೊತೆಗೆ ಕುಡಿಯುವ ನೀರು, ಶೌಚಾಲಯ, ಭದ್ರತೆ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳೂ ಇರಬೇಕು. ಆದರೆ ಇಲ್ಲಿ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಇದರ ಜೊತೆಗೆ ಇಲ್ಲಿ ಸಿಬ್ಬಂದಿಗಳ ಕೊರತೆಯೂ ಎದ್ದು ಕಾಣುತ್ತಿದ್ದು, ಭವನದ ಸ್ವಚ್ಛತೆಗೆ ಹಾಗೂ ಭದ್ರತೆಗೆ ಒಬ್ಬ ಸಿಬ್ಬಂದಿಯೂ ಇಲ್ಲ. ಪರಿಣಾಮ ಅಲ್ಲಲ್ಲಿ ಅನೈರ್ಮಲ್ಯ ಕಾಡುತ್ತಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಡಾ.ರಾಜ್‌ ಕುಮಾರ್‌ ಜಿಲ್ಲಾ ರಂಗಮಂದಿರಕ್ಕೆ ಸಿಬ್ಬಂದಿಗಳನ್ನು ನೇಮಿಸಿ, ಇಲ್ಲಿ ಶುಚಿತ್ವ ಕಾಪಾಡಬೇಕು. ಬಳಿಕ ಕಲಾವಿದರಿಗೆ ಉತ್ತಮ ವೇದಿಕೆ ಸಿದ್ಧಗೊಳ್ಳಬೇಕು ಎಂದು ಕಲಾರಸಿಕರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.