Mysore
22
scattered clouds

Social Media

ಮಂಗಳವಾರ, 07 ಏಪ್ರಿಲ 2026
Light
Dark

ಗುಂಡ್ಲುಪೇಟೆ ಅರಣ್ಯಕ್ಕೆ ಅಕ್ರಮ ಪ್ರವೇಶ: ಅರಣ್ಯ ಇಲಾಖೆಯಿಂದ ಇಬ್ಬರಿಗೆ 25,000 ದಂಡ

gundlupete

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದ ಇಬ್ಬರಿಗೆ ಅರಣ್ಯ ಇಲಾಖೆ 25 ಸಾವಿರ ದಂಡ ವಿಧಿಸಿದೆ.

ಕಾಡಿಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ ರಸ್ತೆ ಸಮೀಪವೇ ಫೋಟೋಶೂಟ್‌ ಮಾಡಿಸುತ್ತಿದ್ದ ಬೆಂಗಳೂರು ಮೂಲಕ ಯುವಕ ಹಾಗೂ ಯುವತಿಗೆ ಭಾರೀ ದಂಡ ವಿಧಿಸಲಾಗಿದೆ.

ಬಂಡೀಪುರದ ಮಂಗಲ ರಸ್ತೆ ಸಮೀಪ ಈ ಘಟನೆ ನಡೆದಿದ್ದು, ಬೆಂಗಳೂರು ಮೂಲದ ಪಲ್ಲವಿ ಮತ್ತು ಘೋಷ್ ಎಂಬುವವರು ಕಾಡಿನೊಳಗೆ ಅತಿಕ್ರಮ ಪ್ರವೇಶಿಸಿ ಫೋಟೋಶೂಟ್‌ ಮಾಡಿಸಿದ್ದರು.

ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಪ್ರವಾಸಿಗರು, ಈ ವಿಡಿಯೋವನ್ನು ಬಂಡೀಪುರ ಎಸಿ‌ಎಫ್ ನವೀನ್ ಕುಮಾರ್‌ ಅವರಿಗೆ ಕಳುಹಿಸಿ ದೂರು ನೀಡಿದ್ದರು.

ಇದನ್ನೂ ಓದಿ:- ಬುಲೆಟ್‍’ ಮೇಲೆ ಬಂದ ಧರ್ಮ ಕೀರ್ತಿರಾಜ್; ಜೂನ್ 20ಕ್ಕೆ ಚಿತ್ರ ಬಿಡುಗಡೆ

ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಲ್ಲವಿ ಮತ್ತು ಘೋಷ್ ಎಂಬುವವರನ್ನು ಕರೆಸಿ ಮುಚ್ಚಳಿಕೆ ಪತ್ರ ಬರೆಸಿದ್ದಲ್ಲದೇ 25 ಸಾವಿರ ದಂಡ ಕಟ್ಟಿಸಿದ್ದಾರೆ.

Tags:
error: Content is protected !!