ಚಾಮರಾಜನಗರ: ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನ ರಥೋತ್ಸವ ಮಂಗಳವಾರ (ಏ.೯) ಅದ್ಧೂರಿಯಾಗಿ ನೆರವೇರಿತು.
ಇಂದು ಬೆಳಿಗ್ಗೆ ೭.೩೦ ರಿಂದ ೯.೩೦ ನಡುವಿನ ಶುಭ ಮುಹೂರ್ತದಲ್ಲಿ ದೇವಾಲಯದ ಸುತ್ತ ಸೇರಿದ್ದ ಸಾವಿರಾರು ಭಕ್ತರ ಸಮೂಹದಿಂದ ತೆರನ್ನು ಎಳೆಯಲಾಯಿತು.
ಬೇಡಗಂಪಣ ಸಮುದಾಯದ ಸಂಪ್ರದಾಯದಂತೆ ಧಾರ್ಮಿಕ ಕೈಂಕರ್ಯಗಳು ನಡೆದವು. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಬಿಳಿ ಆನೆ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.