Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ದುರ್ಮರಣ

ಹನೂರು : ತಾಲೂಕಿನ ಹೊಗೆನಕಲ್ ಫಾಲ್ಸ್ ನಲ್ಲಿ ತಮಿಳುನಾಡಿನ ಇಬ್ಬರು ಯುವಕರು ನೀರಿನಲ್ಲಿ‌ ಮುಳುಗಿ‌ ಸಾವನ್ನಪ್ಪಿದ್ದಾರೆ.

ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಶಬರಿ (24)ಅಜಿತ್(26) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ತಮಿಳುನಾಡಿನಿಂದ ಪಳನಿ, ಕೊಡೈಕ್ಯಾನ್ ಲ್ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ, ಮಲೆ ಮಹದೇಶ್ವರ ಸ್ವಾಮಿಯ ಪೂಜೆಯನ್ನು ಸಲ್ಲಿಸಿ ತಮ್ಮ 12 ಜನ ಸ್ನೇಹಿತರ ಜೊತೆಗೂಡಿ ಹೊಗೆನಕಲ್ ಫಾಲ್ಸ್ ನಲ್ಲಿ ಈಜಲು ತೆರಳಿದ್ದಾರೆ ‌ಎನ್ನಲಾಗಿದೆ.

ಈ ವೇಳೆ ಅಜಿತ್ ಮತ್ತು ಶಬರಿ ಈಜಲು ಹೋದವರು ಮತ್ತೆ ವಾಪಸ್ ಬಂದಿರಲಿಲ್ಲ. ವಿಚಾರ ತಿಳಿದ ಸ್ನೇಹಿತರು ಹಾಗೂ ಸ್ಥಳೀಯರು ಮಲೆ ಮಹದೇಶ್ವರ ಬೆಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ನುರಿತ ಈಜುಗಾರರ ಸಹಾಯದಿಂದ ಬಲೆ ಹಾಕಿ ಶವ ಪತ್ತೆ ಮಾಡಲಾಗಿದೆ.

ಈ ಸಂಬಂಧ ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ