ಕೊಳ್ಳೇಗಾಲ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಅಗರ ಮಾಂಬಳ್ಳಿ ಪೊಲೀಸರು ಬಂಧಿಸಿ, 1096 ಕೆ.ಜಿ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಫರ್ಹನ್ ಪಾಷಾ, ಹಾಗೂ ಟಿ.ಎನ್.ಪುರ ತಾಲ್ಲೂಕಿನ ಗರ್ಗೆಶ್ವರಿ ಗ್ರಾಮದ ಅಜ್ಮದ ಪಾಷಾ ಬಂಧಿತ ಆರೋಪಿಗಳು. ಸಾಗಾಣಿಕೆ ಬಳಸಿದ್ದ ಗೂಡ್ಸ್ ಆಟೋ ಹಾಗೂ 1096 ಕೆ.ಜಿ ಅಕ್ಕ ಜಪ್ತಿ ಮಾಡಿದ್ದಾರೆ.
ಇವರುಗಳು ಸರ್ಕಾರ ಬಡವರಿಗೆ ನೀಡುವ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಡ ಮಾಡಲು ಗೂಡ್ಸ್ ವಾಹನದಲ್ಲಿ ಕೆಸ್ತೂರು -ಹೊನ್ನೂರು ಕಡೆಯಿಂದ ಮೈಸೂರಿಗೆ ಸಾಗಾಣಿಕೆ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಉಮಾವತಿ ಹಾಗೂ ಆಹಾರ ನಿರೀಕ್ಷಿಕ ಬಿಸಲಾಯ್ಯ ಜಂಟಿ ದಾಳಿ ನಡೆಸಿ ಆರೋಪಿ ಯನ್ನು ಬಂಧಿಸಿದ್ದಾರೆ.
ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಪರಶಿವಮೂರ್ತಿ ಆರ್, ಪೊಲೀಸ್ ಕಾನ್ಸ್ಟೇಬಲ್ ಬಸವರಾಜ್ ಗುತ್ತಲ್, ಉಸ್ಮಾನ್, ಬಸವರಾಜ, ಶಿವಕುಮಾರ, ಚಾಲಕ ಮಲ್ಲೇಶ್ ಇದ್ದರು.





