Mysore
30
clear sky

Social Media

ಮಂಗಳವಾರ, 11 ಮಾರ್ಚ್ 2025
Light
Dark

ಬಿಆರ್‌ಟಿ ವಲಯದಲ್ಲಿ ಎರಡು ಗಂಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಳಿಗಿರಿರಂಗಬೆಟ್ಟ ಹುಲಿ ಸಂರಕ್ಷಿತಾರಣ್ಯದ ಯಳಂದೂರು ವಲಯದ ಪುರಾಣಿ ಶಾಖೆಯಲ್ಲಿ ಗಂಡಾನೆಗಳ ಕಳೇಬರ ಪತ್ತೆಯಾಗಿದೆ.

ಬಿಆರ್‌ಟಿ (ಬಿಳಿಗಿರಿ ರಂಗನ ಬೆಟ್ಟ) ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದ ಯಳಂದೂರು ವಲಯದಲ್ಲಿ ಒಂದು ಆನೆ ಕಳೇಬರ ಪತ್ತೆಯಾದರೇ, ಬೈಲೂರು ವಲಯದಲ್ಲಿ ಮತ್ತೊಂದು ಆನೆ ಕಳೇಬರ ಪತ್ತೆಯಾಗಿರುವುದು ವರದಿಯಾಗಿದೆ.

ಇತ್ತೀಚೆಗೆ ಬೇತಾಳಕಟ್ಟೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಆಳಶೆಟ್ಟಿ ಮೂಲೆಯಲ್ಲಿ 40 ವರ್ಷ ವಯಸ್ಸಿನ ಗಂಡಾನೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರೇಲಾಲ್, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ಶ್ರೀಪತಿ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬೈಲೂರು ರೇಂಜಿನಲ್ಲಿ ಮೃತಪಟ್ಟಿರುವ ಆನೆ ಸುಮಾರು 8 ತಿಂಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಕಳೆದ 20 ದಿನಗಳ ಹಿಂದೆ ಸ್ವಾಭಾವಿಕವಾಗಿ ಆನೆ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು 2 ದಂತಗಳು ಸುರಕ್ಷಿತವಾಗಿವೆ. ಎಸಿಎಫ್ ಕೆ.ಸುರೇಶ್, ಆರ್‌ಎಫ್‌ಒ ನಾಗೇಂದ್ರ ನಾಯಕ ಅವರ ಸಮ್ಮುಖದಲ್ಲಿ ಪಶು ವೈದ್ಯರಾದ ಡಾ.ವಾಸಿಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದರು. 2 ದಂತಗಳನ್ನು ಇಲಾಖೆಯ ವಶಕ್ಕೆ ಪಡೆಯಲಾಯಿತು.

ಇನ್ನು ಆನೆಗಳು ಸುಮಾರು ತಿಂಗಳುಗಳ ಹಿಂದೆಯೇ ಸತ್ತು ಹೋಗಿರುವುದು ಕಂಡುಬಂದಿದ್ದು, ಕಳೇಬರ ಪತ್ತೆಯಾಗುವ ವರೆಗೂ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Tags: