Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಗಂಧದ ಮರದ ಸಾಗಾಟ: ಆರೋಪಿಗಳಿಗೆ ಐದು ವರ್ಷ ಶಿಕ್ಷೆ

ಹನೂರು: ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ 16 ಕೆಜಿ ಗಂಧದ ಮರಗಳನ್ನು ಸಾಗಾಟ ಮಾಡಿ ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬಿತಾದ ಹಿನ್ನೆಲೆ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಾಲ ಸೆರೆವಾಸ 50 ಸಾವಿರ ದಂಡ ವಿಧಿಸಿ ಅಪರ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿಸಿ ಶ್ರೀಕಾಂತ್ ರವರು ತೀರ್ಪು ನೀಡಿದ್ದಾರೆ.

ಅರಣ್ಯ ಸಿಬ್ಬಂದಿಗಳಾದ ರಸುಲ್ ವಾಲಿಕರ್ ಮತ್ತು ಸಿಬ್ಬಂದಿಗಳು ಲೊಕ್ಕನಹಳ್ಳಿ ಕಳ್ಳಬೇಟೆ ಶಿಬಿರದಿಂದ ಲೊಕ್ಕನಹಳ್ಳಿ ಸೂಲರ್ ಗೇಟ್ ಕಡೆ ಹೋಗುವ ರಸ್ತೆ ಮಧ್ಯದಲ್ಲಿ 16-09-2020 ರಂದು ತೆರಳುತ್ತಿದ್ದಾಗ ನಾಲ್ವರು ಆರೋಪಿಗಳು 16 ಕೆಜಿ ಹಸಿ ಗಂಧದ ಮರದ ತುಂಡುಗಳು ಹಾಗೂ ಚಕ್ಕೆಗಳನ್ನು ಒಂದು ಬ್ಯಾಗಿನಲ್ಲಿ ಸಾಗಣೆ ಮಾಡುತ್ತಿದ್ದಾಗ ಹಿಡಿದು ಬಂಧಿಸಿ ಮಾಲುಗಳನ್ನು ಅಮಾನತುಪಡಿಸಿಕೊಳ್ಳಲಾಗಿತ್ತು . ಈ ಸಂಬಂಧ ಅಂದಿನ ಎ.ಸಿ ಎಫ್ ವನಿತಾ ರವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಈ ಪ್ರಕರಣ ಸಂಬಂಧ ಪ್ರಕರಣದ ಮೊದಲ ಆರೋಪಿ ಮಾದೇವ ಆಲಿಯಾಸ್ ಕೋಣ್ಣುರ, ಮೂರನೇ ಆರೋಪಿ ರಂಗನಿಗೆ ಐದು ವರ್ಷ ಸರೆವಾಸ, ಐವತ್ತು ಸಾವಿರ ತಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದರೆ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ. ಪ್ರಕರಣದ ಎರಡನೇ ಆರೋಪಿ ಕುಂಬೇಗೌಡ ವಿಚಾರಣೆ ಸಮಯದಲ್ಲಿ ಮೃತಪಟ್ಟಿರುವುದರಿಂದ ಹಾಗೂ ನಾಲ್ಕನೇ ಆರೋಪಿ ಅಬ್ದುಲ್ ಜಮೀರ್ ಅನ್ನು ಅರಣ್ಯ ಕಾಯ್ದೆ ಕಾಲಂ 87 ರಡಿ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಇಬ್ಬರಿಗೆ ಶಿಕ್ಷೆ ವಿಧಿಸಲಾಗಿದೆ.

Tags: