ಗುಂಡ್ಲುಪೇಟೆ: ಪಟ್ಟಣದ ಕೂತನೂರು ಗುಡ್ಡ ಹಾಗೂ ತೆರಕಣಾಂಬಿ ಭಾಗದಿಂದ ಅಧಿಕ ಭಾರಹೊತ್ತು ಸಾಗುವ ಟಿಪ್ಪರ್ ಗಳ ಸಂಚಾರ ನಡೆಸುತಿದ್ದರು ಆರ್ ಟಿಓ ಇಲಾಖೆ ಹಾಗೂ ಗಣಿ ಇಲಾಖೆ ಬ್ರೇಕ್ ಹಾಕಬೇಕು ಎಂದುಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಿಪ್ಪರ್ ಗಳು ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲಿಕರಣ ನಡೆಯುತಿದ್ದರು ಅತಿ ವೇಗವಾಗಿ ಹಾಗೂ ಅಧಿಕ ಭಾರ ಹೊತ್ತು ಸಾಗುತ್ತಿದ್ದು ಇದಕ್ಕೆ ಪೊಲೀಸರು ಹಾಗೂ ಆರ್ ಟಿಓ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗಲಿದೆ ಎಂದು ತಾಲ್ಲೂಕು ವೀರಶೈವ ಮಹಾಸಭೆ ನಿರ್ದೇಶಕ ನಂದೀಶ್ ಹಂಗಳ ಒತ್ತಾಯಿಸಿದರು.
ಒಂದು ಟಿಪ್ಪರ್ ಪರ್ಮಿಟ್ ಪಡೆದು ಹತ್ತಾರು ಟಿಪ್ಪರ್ ಗಳು ಸಂಚಾರ ನಡೆಸಿ ಸರ್ಕಾರಕ್ಕೆ ರಾಜಧನ ವಂಚಿಸುತಿದ್ದು ಕೆಲವು ಕಡೆ ಅಕ್ರಮವಾಗಿ ಗಣಿಗಾರಿಕೆ ನಡೆಯುತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇದ್ಯಾವುದನ್ನು ಪರಿಶೀಲನೆ ನಡೆಸುತಿಲ್ಲ ಎಂದು ಆರೋಪಿಸಿದರು.
ಅಧಿಕ ಬಿಳಿಕಲ್ಲು ಸಾಗಾಣೆ ವೇಳೆ ಪಕ್ಕದಲ್ಲಿಸಂಚರಿಸುವ ಬೈಕ್ ಮತ್ತಿತರ ವಾಹನದ ಮೇಲೆ ಕಲ್ಲು ಬಿದ್ದು ಪ್ರಾಣಹಾನಿ ಸಂಭವಿಸಿದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.





