Mysore
25
scattered clouds

Social Media

ಬುಧವಾರ, 18 ಮಾರ್ಚ್ 2026
Light
Dark

ಶಾಲಾ ಮಕ್ಕಳಿದ್ದ ವಾಹನಕ್ಕೆ ಟಿಪ್ಪರ್‌ ಡಿಕ್ಕಿ : 9 ಮಕ್ಕಳಿಗೆ ಪೆಟ್ಟು

ಗುಂಡ್ಲುಪೇಟೆ : ತಾಲ್ಲೂಕಿನ ಚಿಕ್ಕತುಪ್ಪೂರು ಗೇಟ್ ಬಳಿ ಶಾಲಾ ಮಕ್ಕಳನ್ನು ಕರೆದೋಯ್ಯುತಿದ್ದ ಟಾಟಾ ಏಸ್ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ ಟಾಟಾ ಎಸ್ ವಾಹನದಲ್ಲಿದ್ದ 9 ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಅಸ್ಪತ್ರೆಗೆ ಪೋಷಕರೆ ಕರೆದೋಯ್ದ ಘಟನೆ ನಡೆದಿದೆ.

ಸನ್ ಜಾನ್ಸ್ ಶಾಲೆಯಲ್ಲಿ ಒದುತ್ತಿರುವ ಮಕ್ಕಳಾಗಿದ್ದು ಶಿಂಡನಪುರ, ಕಂದೆಗಾಲ ಗ್ರಾಮದಿಂದ ಮಕ್ಕಳನ್ನು ಪ್ರತಿನಿತ್ಯ ಬೆಳಿಗ್ಗೆ ಸಂಜೆ ಕರೆದೊಯ್ಯುತಿದ್ದರು. ಟಿಪ್ಪರ್ ಎಕಾಏಕಿ ಬಂದು ಗುದ್ದಿದ ಪರಿಣಾಮ ಚಾಲಕನಿಗೆ ತಲೆ ಕಾಲಿಗೆ ಬಲವಾದ ಪೆಟ್ಟುಬಿದ್ದಿದ್ದು, 9 ಮಕ್ಕಳಿಗೆ ಕೈ ಕಾಲು ಮುರಿತದಿಂದ ಗಂಭೀರ ಗಾಯವಾಗಿದ್ದು ಪೋಷಕರ ಆಕ್ರಂದಣ ಮುಗಿಲು ಮುಟ್ಟಿತ್ತು.

ತಾಲ್ಲೂಕಿನಲ್ಲಿ ಟಿಪ್ಪರ್ ಗಳ ಹಾವಳಿ ಹೆಚ್ಚಿದ್ದು, ಶಾಲಾ ಸಮಯದಲ್ಲಿ ಟಿಪ್ಪರ್ ಗಳ ನಿಷೇಧ ಮಾಡಬೇಕು ಹಾಗೂ ಅಧಿಕ ಬಾರಹೊತ್ತ ಟಿಪ್ಪರ್ ಹಾಗೂ ಕಂಟೆನರ್ ಗಳಿಗೆ ಕಡಿವಾಣ ಹಾಕಬೇಕು. ಪ್ರತಿನಿತ್ಯ ಟಿಪ್ಪರ್ ಗಳ ಅಬ್ಬರ ಹೆಚ್ಚಾಗಿದ್ದು ವಾಹನ ಸವಾರರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದು ಸಾರ್ವಜನಿಕರು ಆರೋಪಿದ್ದಾರೆ.

ಆರ್ ಟಿಓ, ಗಣಿ ಇಲಾಖೆ ಪೊಲೀಸರ ವೈಪಲ್ಯ ; ಆರೋಪ
ಟಿಪ್ಪರ್ ಗಳ ಡ್ರೈವರ್ ಗಳು ಕುಡಿದು ಚಾಲನೆ ಮಾಡುತಿದ್ದು ಅಧಿಕ ಬಾರ ಹೊತ್ತು ಮನ ಬಂದಂತೆ ಚಾಲನೆ ಮಾಡುತ್ತಿರುವ ಕಾರಣ ಅಪಘಾತಗಳು ಹೆಚ್ಚುತಿದ್ದು, ನೂರಾರು ಸಂಖ್ಯೆಯ ಟಿಪ್ಪರ್ಗಳು ಒಡಾಡುತ್ತಿದ್ದು ಅಧಿಕ ಭಾರ,ಪರ್ಮಿಟ್ ಇಲ್ಲದ ವಾಹನಗಳ ಮೇಲೆ ಗಣಿ ಇಲಾಖೆ, ಪೊಲಿಸರು, ಆರ್ ಟಿಓ ಅದಿಕಾರಿಗಳು ಕ್ರಮ ವಹಿಸದೆ ಇರುವ ಕಾರಣ ತಾಲ್ಲೂಕಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ ಅಡಳಿತ ವ್ಯವಸ್ಥೆ ಸರಿಯಿಲ್ಲ ತಾಲ್ಲೂಕಿನಲ್ಲಿ ಹೆಳುವವರು ಕೇಳುವವರು ಇಲ್ಲ ರಾತ್ರಿ ಬೆಳಿಗ್ಗೆ ಎನ್ನದೆ ಎಲ್ಲಾ ಸಮಯದಲ್ಲಿ ಟಿಪ್ಪರ್ ಅಬ್ಬರದಿಂದ ಜನಸಾಮಾನ್ಯರು ಓಡಾಡುವುದೇ ಕಷ್ಟವಾಗಿದೆ ಎಂದು ಪೋಷಕ ರಘು ಆರೊಪಿಸಿದ್ದಾರೆ.

ಕೇರಳದಲ್ಲಿ ಶಾಲೆಗೆ ತೆರಳುವ ಸಮಯದಲ್ಲಿ ವಾಹನಗಳಿಗೆ ಕಡಿವಾಣ
ಕೆರಳದಲ್ಲಿ ಶಾಲೆಗೆ ತೆರಳುವಾಗ ಮತ್ತು ಶಾಲೆ ಬಿಡುವಾಗ ಭಾರಿ ವಾಹನಗಳ ಪಾಲನೆ ಇರುವುದಿಲ್ಲ‌ ಮತ್ತು ಶಾಲಾ ಸಮಯದಲ್ಲಿ ವಾಹನ ಚಾಲನೆ ನಿಧಾನವಾಗಿರುತ್ತದೆ. ಆದರೆ ಕೇರಳ ಸಂಖ್ಯೆಯ ಟಿಪ್ಪರ್ ಕಂಟೇನರ್ ಗಳನ್ನು ತಂದು ಗುಂಡ್ಲುಪೇಟೆ ತಾಲ್ಲೂಕಿನ ಜನತೆಯ ಪ್ರಾಣ ಕಸಿಯುವ ಕೆಲಸ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Tags:
error: Content is protected !!