Mysore
26
broken clouds

Social Media

ಸೋಮವಾರ, 26 ಜನವರಿ 2026
Light
Dark

ಬಿಳಿಗಿರಂಗನ ಬೆಟ್ಟದ ವ್ಯೂ ಪಾಯಿಂಟ್ ಬಳಿ ಹುಲಿ ಪ್ರತ್ಯಕ್ಷ: ಭಯಭೀತರಾದ ಜನರು

tiger (2)

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಸ್ವಾಮಿ ಬೆಟ್ಟದ ವ್ಯೂ ಪಾಯಿಂಟ್ ಹತ್ತಿರ ಹುಲಿ ಪ್ರತ್ಯಕ್ಷವಾಗಿದ್ದು, ಜನರನ್ನು ಭಯಭೀತರನ್ನಾಗಿಸಿದೆ.

ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಹುಲಿ ಕಾಣಿಸಿಕೊಂಡಿದ್ದು, ದೇವರ ದರ್ಶನ ಪಡೆದ ನಂತರ ವ್ಯೂಪಾಯಿಂಟ್‌ಗೆ ಬಂದ ಜನರು ಹುಲಿಯನ್ನು ಕಂಡು ಭಯದಿಂದ ಹಿಂದಿರುಗಿದ್ದಾರೆ.

ಹುಲಿಯ ಚಲನವಲನದ ದೃಶ್ಯ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ನಂಜುಂಡಸ್ವಾಮಿ ಎಂಬುವವರ ಮೊಬೈಲ್‌ನಲ್ಲಿ ಸೆರೆಯಾಗಿದೆ.

Tags:
error: Content is protected !!