Mysore
17
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮ.ಬೆಟ್ಟ | ಲಾಡು ಪ್ರಸಾದದಲ್ಲಿ ಮುಳ್ಳು ; ಕಾರ್ಯದರ್ಶಿ ಸ್ಪಷ್ಟನೆ

Thorn malemahadeshwara hill prasadam

ಹನೂರು: ಪವಾಡ ಪುರುಷ ಶ್ರೀ ಕ್ಷೇತ್ರ ಮಲೆ ಮಹದೇಶ್ವರ (Malemahadeshwara hill) ಬೆಟ್ಟಕ್ಕೆ ಕೆಟ್ಟ ಹೆಸರು ತರಲು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬೆಟ್ಟದ ಲಾಡಿನಲ್ಲಿ ಮುಳ್ಳು (Thorn) ಸಿಕ್ಕಿದೆ ಎಂದು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಈ ಸ್ಪಷ್ಟಪಡಿಸಿದ್ದಾರೆ.

ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಇರಘು ಮಾಧ್ಯಮದವರೊಂದಿಗೆ ಮಾತನಾಡಿ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಲಾಡು ಪ್ರಸಾದ ಮುಳ್ಳಿದೆ (Thorn) ಎಂದು ಕಳೆದ ವಾರ ಭಕ್ತಾದಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ (Social media) ವಿಡಿಯೋ ಹರಿ ಬಿಟ್ಟಿದ್ದರು.

ಇದನ್ನೂ ಓದಿ:- ವಾಜಮಂಗಲ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಪಮಾನ: ಬೀದಿಗಿಳಿದು ಪ್ರತಿಭಟನೆ ನಡೆಸಿದ ಮಹಿಳೆಯರು 

ಈ ಸಂಬಂಧ ಒಂದು ತಂಡ ರಚನೆ ಮಾಡಿ ಲಾಡು ತಯಾರಿಕ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ಮಾಡಲಾಗಿ ಲಾಡು ಪ್ರಸಾದದಲ್ಲಿ ಸಿಕ್ಕಿರುವ ಮುಳ್ಳು (Thorn) ನಮ್ಮ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಇಲ್ಲ, ಆದ್ದರಿಂದ ಭಕ್ತಾದಿಗಳು ಸುಳ್ಳು ವಿಡಿಯೋಗಳನ್ನು ಶೇರ್ ಮಾಡಬಾರದು ಎಲ್ಲರಿಗೂ ಮಹದೇಶ್ವರ ಒಳ್ಳೆಯದು ಮಾಡಲಿ ಎಂದು ಮನವಿ ಮಾಡಿದ್ದಾರೆ.

ಇನ್ನು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ತಯಾರು ಮಾಡುವ ಲಾಡಿಗೆ ನಂದಿನಿ ತುಪ್ಪ, ಗುಣಮಟ್ಟದ ಅಡುಗೆ ಎಣ್ಣೆ, ದ್ರಾಕ್ಷಿ ಗೋಡಂಬಿ, ಕಡ್ಲೆ ಹಿಟ್ಟು, ಸಕ್ಕರೆ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂದು ವಿಡಿಯೋ ಚಿತ್ರೀಕರಿಸಿ ಮಾಹಿತಿ ಹಂಚಿಕೊಂಡಿದ್ದಾರೆ.

Tags:
error: Content is protected !!