Mysore
17
few clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ರಾಮಪುರ ಆನೆ ಶಿಬಿರದಲ್ಲಿ ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಗೆ ಚಿಂತನೆ

ಚಾಮರಾಜನಗರ : ಆನೆಗಳ ಸಂಖ್ಯೆಯಲ್ಲಿ ಬಂಡಿಪುರಕ್ಕೆ ಮೊದಲ ಸ್ಥಾನ ಬಂದ ಬೆನ್ನಲ್ಲೆ ಅರಣ್ಯ ಇಲಾಖೆ ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಬಂಡಿಪುರಕ್ಕೆ ಮತ್ತಷ್ಟು ಪ್ರವಾಸಿಗರnfnuಯಲು ಗುಂಡ್ಲುಪೇಟೆ ತಾಲೂಕಿನಲ್ಲಿರುವ ರಾಮಪುರ ಆನೆ ಬಿಡಾರದಲ್ಲಿ ಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಬಂಡಿಪುರ ಸಿಎಫ್ ರಮೇಶ್ ಕುಮಾರ್ ಅವರು ಪಿಸಿಸಿಎಫ್​​ಗೆ ವರದಿ ಸಲ್ಲಿಸಿದ್ದಾರೆ.

ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಯಾದರೆ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾದ್ಯತೆ ಇದೆ. ಈಗಾಗಲೇ ಪ್ರತಿ ತಿಂಗಳು ಸಫಾರಿಯಿಂದಲೇ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿರುವ ಹಿನ್ನೆಲೆ ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಸ್ಥಾಪನೆಯಾದರೆ ಬಂಡಿಪುರಕ್ಕೆ ಮತ್ತಷ್ಟು ಆದಾಯ ಹರಿದು ಬರಲಿರಲಿದೆ ಎಂಬುದು ಅಧಿಕಾರಿಗಳ ಪ್ಲಾನ್.

ಎಲಿಫೆಂಟ್ ಫೀಡಿಂಗ್ ಕ್ಯಾಂಪ್ ಜೊತೆಗೆ ಆನೆಗಳಿಗೆ ತರಬೇತಿ ನೀಡುವುದನ್ನ ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಬಂಡಿಪುರದಲ್ಲಿ ಸಫಾರಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಮನಸೋತಿದ್ದರು. ಬರೋಬ್ಬರಿ 2 ಗಂಟೆಗಳ ಕಾಲ ಸಫಾರಿ ಮಾಡಿದ್ದರು. ಮೋದಿ ಸಫಾರಿ ಬಳಿಕ ರಾಜ್ಯದ ಇತರೆ ಜಿಲ್ಲೆಗಳಿಂದ ಅಲ್ಲದೆ, ಹೊರ ರಾಜ್ಯ, ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!