Mysore
32
few clouds

Social Media

ಸೋಮವಾರ, 02 ಮಾರ್ಚ್ 2026
Light
Dark

ಹನೂರು: ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ಮನೋಜ್‌ ಕುಮಾರ್‌ ನೇತೃತ್ವದ ತಂಡ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು 

ಹನೂರು: ಪಟ್ಟಣದ ಕ್ರಿಸ್ತರಾಜ ಶಾಲೆಯ ಶಿಕ್ಷಕ ಮನೋಜ್ ಕುಮಾರ್.ಪಿ. ಅವರು ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆಯುವಲ್ಲಿ ತಮ್ಮ ತಂಡದಲ್ಲಿ ಪ್ರಮುಖ ಪಾತ್ರವಹಿಸಿ ಗ್ರಾಮ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಆರ್ ಡಿ ಸಿ, ಎಸ್ಎನ್ಐಸಿ ಶಿಬಿರಗಳಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಇವರು ವಾಯುದಳ ಎನ್‌ಸಿಸಿ ವಿಭಾಗದ ಸೆಕೆಂಡ್ ಆಫೀಸರ್ ಆಗಿ ಅತಿ ಹೆಚ್ಚು ಅಂಕಗಳೊಂದಿಗೆ ಸತತ ಎರಡನೇ ಬಾರಿಗೆ ಪ್ರಧಾನ ಮಂತ್ರಿ ಆರ್.ಡಿ.ಸಿ ಬ್ಯಾನರ್ ಅನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ದೆಹಲಿಯಲ್ಲಿ ನಡೆದ ಆರ್ ಡಿ ಸಿ, ಎಸ್ಎನ್ಐಸಿ ಶಿಬಿರಗಳಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ ವಿವಿಧ ಜಿಲ್ಲೆಗಳ ಸುಮಾರು 128 ಆರ್ಮಿ, ನೌಕಾದಳ ಮತ್ತು ವಾಯುಸೇನೆಯ ಕ್ಯಾಡೆಟ್ ಗಳು ಭಾಗವಹಿಸಿ ಕಠಿಣ ಪರಿಶ್ರಮದಿಂದ ಡ್ರಿಲ್, ವ್ಯಾಪೆನ್ ಟ್ರೇನಿಂಗ್, ಫೈರಿಂಗ್, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇಶದ ಒಟ್ಟಾರೆ 17 ನಿರ್ದೇಶನಾಲಯಗಳ ನಡುವೆ ಅತ್ಯಧಿಕ ಅಂಕಗಳೊಂದಿಗೆ ಈ ಸಾಧನೆ ಗೈದಿದ್ದಾರೆ.

ಈ ಯಶಸ್ಸಿಗೆ ಕಾರಣಿಕರ್ತರಾದ ಎಲ್ಲಾ ಕೆಡೆಟ್ ಗಳು, ತರಬೇತಿ ನೀಡಿದ ವಿವಿಧ ಘಟಕಗಳ ಅಧಿಕಾರಿಗಳಿಗೂ ಹಾಗೂ ಪ್ರೋತ್ಸಾಹ ನೀಡಿದ ವಿವಿಧ ವಿದ್ಯಾಸಂಸ್ಥೆಗಳಿಗೂ ಮನೋಜ್ ಕುಮಾರ್.ಪಿ.ಅವರು ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಶಿಬಿರದ ರ್ಯಾಲಿಯಲ್ಲಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ಯಾಡೆಟ್ ಗಳನ್ನು ಉದ್ದೇಶಿಸಿ ಪ್ರಶಂಸೆ ಮತ್ತು ಪ್ರೇರಣಾತ್ಮಕ ಭಾಷಣವನ್ನು ನೀಡಿದ್ದು, ವಿಜೇತರನ್ನು ಅಭಿನಂದಿಸಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ರಕ್ಷಣಾ ಮಂತ್ರಿಗಳು, ಎಲ್ಲಾ ಸಶಸ್ತ್ರ ಪಡೆಗಳ ಮುಖ್ಯಸ್ಥರು ಹಾಗೂ ಎನ್‌ಸಿಸಿಯ ಪ್ರಧಾನ ಅಧಿಕಾರಿಗಳು ಉಪಸ್ಥಿತರಿದ್ದರು.

ಅಭಿನಂದನೆಗಳ ಮಹಾಪೂರ: ವಿಶೇಷವೆಂದರೆ ನಮ್ಮ ಚಾಮರಾಜನಗರ ಜಿಲ್ಲೆಯ ಬಿ. ಗುಂಡಾಪುರ ಗ್ರಾಮದ ಹಾಗೂ ಕ್ರಿಸ್ತರಾಜ ಶಾಲೆಯ ಶಿಕ್ಷಕರಾದ ಮನೋಜ್ ಕುಮಾರ್ ಪಿ ರವರು ವಾಯುದಳ ಎನ್‌ಸಿಸಿ ವಿಭಾಗದ ಸೆಕೆಂಡ್ ಆಫೀಸರ್ ಆಗಿದ್ದು, ಈ ಒಂದು ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿ ವಿಜೇತರಾಗಿ ಗ್ರಾಮಕ್ಕೆ ಆಗಮಿಸಿದ ವೇಳೆ ಗ್ರಾಮಸ್ಥರು ಹಾಗೂ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಫಾದರ್ ರೋಷನ್ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

 

Tags:
error: Content is protected !!