ಕೊಳ್ಳೆಗಾಲ: ಒಂದೇ ಜಿಲ್ಲೆಯ ಒಂದೇ ಪಕ್ಷದ ಶಾಸಕರು ಸದನದಲ್ಲಿ ಈ ರೀತಿ ಕಿತ್ತಾಡಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದ್ದಾರೆ.
ಕೊಳ್ಳೆಗಾಲ ಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಕ್ಷೇತ್ರದ ಶಾಸಕರಾದ ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು ವಿಧಾನ ಸಭಾ ಕಲಾಪದ ವೇಳೆ ಕಿತ್ತಾಡಿಕೊಂಡಿರುವುದನ್ನು ನಾನು ಗಮನಿಸಿದ್ದೇನೆ ಇದು ದುರದೃಷ್ಟಕರ ಎಂದರು.
ನಿಮ್ಮ ಸಮಸ್ಯೆಗಳನ್ನು ವೈಯುಕ್ತಿಕವಾಗಿ ಚರ್ಚಿಸಿ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ವಿಧಾನಸಭೆಯಲ್ಲಿ ಅದು ಕ್ಯಾಮೆರಾ ಮುಂದೆ ಈಗೆಲ್ಲ ಆಡುವುದು ಸರಿಯಲ್ಲ ಎಂದು ಹೇಳಿದರು.