Mysore
19
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಮೀಸಲಾತಿ ಕಲ್ಪಿಸಿದ ಕೀರ್ತಿ ಮೈಸೂರು ರಾಜರದು : ಗೃಹ ಸಚಿವ ಡಾ.ಜಿ.ಪರಮೇಶ್ವರ್

reservation mysuru

ಗುಂಡ್ಲುಪೇಟೆ : ಶೋಷಿತರು ಹಾಗೂ ಹಿಂದುಳಿದವರ ಅಭಿವೃದ್ಧಿಗಾಗಿ ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಬಹು ದೊಡ್ಡದು ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.

ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗ ಹಾಗೂ ಬಾಳೆ ಎಲೆ ಮಾದಯ್ಯ ಸೇವಾ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಡಾ.ಜಿ.ಪರಮೇಶ್ವರ್ ೭೫ನೇ ನೆನಪಿನ ಭವನ ಅಮೃತ ಮಹೋತ್ಸವ ಉದ್ಘಾಟನೆ, ಎಚ್.ಎಂ.ಗಂಗಾಧರಯ್ಯ ಪ್ರತಿಮೆ ಅನಾವರಣ, ಪರಮೇಶ್ವರ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನ, ಮಹಿಳಾ ಗೃಹ ಕೈಗಾರಿಕೆ ಘಟಕದ ನೂತನ ಕಟ್ಟಡ, ಬಾಳೆ ಎಲೆ ಸಹಕಾರ ಸಂಘ ಉದ್ಘಾಟನೆ, ಡಾ.ಜಿ.ಪರಮೇಶ್ವರ ಸಾಲು ಮರದ ರಸ್ತೆ ನಾಮಕರಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನ ಮಹಾರಾಜರುಗಳ ನಿಲುವು ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿತ್ತು. ೧೯೨೭ರಲ್ಲಿ ಮಿಲ್ಲರ್ ಆಯೋಗದ ಶಿಫಾರಸಿನಂತೆ, ಬ್ರಾಹ್ಮಣೇತರರಿಗೆ ಶೇ.೭೫ ರಷ್ಟು ಮೀಸಲಾತಿ ನೀಡಿ ಹೊಸ ಶಕೆಗೆ ಮುನ್ನುಡಿಯನ್ನಿಟ್ಟರು. ಆದ್ದರಿಂದ ನಾವು ಯದುವಂಶಸ್ಥ ರಾಜರ ಕುಟುಂಬವನ್ನು ಗೌರವಿಸುತ್ತೇವೆ ಎಂದರು.

ನಮ್ಮ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ನಮ್ಮ ತಂದೆಗೆ ಪ್ರೀತಿ ಪಾತ್ರರಾಗಿ, ನಮ್ಮ ಕುಟುಂಬಕ್ಕೆ ಮೂರನೇ ಮಗನಾಗಿ ಒಳ್ಳೆಯ ಕೆಲಸಗಳನ್ನು ಪ್ರೊ.ಮಹದೇವ ಭರಣಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪರಮೇಶ್ವರ್ ಟ್ರಸ್ಟ್‌ಗೆ ಹತ್ತು ಲಕ್ಷ ಸಹಾಯಧನ ನೀಡುವುದಾಗಿ ಘೋಷಿಸಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸರಳ ಸಜ್ಜನಿಕೆಯ ರಾಜಕಾರಣಿ ಡಾ.ಜಿ.ಪರಮೇಶ್ವರ್ ಸಾಧನೆ ಬಹಳ ದೊಡ್ಡದು. ಬಂಡಿಪುರ ಅರಣ್ಯದೊಳಗಿನ ಹೆದ್ದಾರಿಗಳಲ್ಲಿ ವಾಹನಗಳ ರಾತ್ರಿ ಸಂಚಾರಕ್ಕೆ ಯಾವಾಗಲೂ ನಮ್ಮ ವಿರೋಧವಿದೆ. ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಸಮಾರಂಭದಲ್ಲಿ ಮನೋರಖ್ಖಿತ ಬಂತೇಜಿ, ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಆರ್.ರಾಜು, ಪ್ರೊ.ಮಹದೇವಭರಣಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಅಧಿಕ್ಷಕರಾದ ಆನಂದಕುಮಾರ್, ಎಸ್‌ಪಿ ಡಾ.ಬಿ.ಟಿ.ಕವಿತಾ, ಕಲಬುರಗಿ ವಿವಿಯ ಪ್ರಾಧ್ಯಾಪಕ ಡಾ.ಎಚ್.ಸಿ.ಪೋತೆ, ಸಿದ್ದಾರ್ಥ ವಿ.ವಿಯ ಕುಲ ಸಚಿವ ಗುರುಶಂಕರ್, ಕೀಲುಮೋಳೆ ತಜ್ಞ ವೈದ್ಯ ಡಾ.ಕಿರಣ್ ಕಾಳಯ್ಯ, ಡಾ.ಗುರುಲಿಂಗಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿ ನಿರ್ದೇಶಕರಾದ ಲಕ್ಷಮ್ಮ, ಉದ್ಯಮಿ ಚಿದಾನಂದ, ಸಾಹಿತಿ ಕಾಳಿಂಗಸ್ವಾಮಿ ಸಿದ್ದಾರ್ಥ ಇತರರು ಹಾಜರಿದ್ದರು.

Tags:
error: Content is protected !!