ಚಾಮರಾಜನಗರ: ಏಪ್ರಿಲ್.24ರಂದು ನಿಗದಿಯಾಗಿರುವ ಸಚಿವ ಸಂಪುಟ ಸಭೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ರೈತ ಮುಖಂಡ ಹಳ್ಳಿಕೆರೆಹುಂಡಿ ಆಗ್ರಹಿಸಿದ್ದಾರೆ.
ಇದೇ ಏಪ್ರಿಲ್.24ಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು, ಗಡಿ ಜಿಲ್ಲೆಗೆ ಹೆಚ್ಚಿನ ಪ್ಯಾಕೇಜ್ ಘೋಷಿಸುವ ನಿರೀಕ್ಷೆಯಿದೆ.
ಈ ಸಂಬಂಧ ಮಾತನಾಡಿರುವ ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜು ಅವರು, ಸಿಎಂ ಅನಾರೋಗ್ಯ ಸೇರಿದಂತೆ ಇತರೆ ಕಾರಣವೊಡ್ಡಿ ಕ್ಯಾಬಿನೆಟ್ ಮೀಟಿಂಗ್ ಮುಂದೂಡಿಕೆ ಮಾಡಲಾಗಿತ್ತು. ಕ್ಯಾಬಿನೆಟ್ ಮೀಟಿಂಗ್ ಸಿದ್ದತೆಗಾಗಿ ಜಿಲ್ಲಾಡಳಿತದ ವತಿಯಿಂದ ಹತ್ತಾರು ಕೋಟಿ ರೂಗಳ ವೆಚ್ಚ ಮಾಡಿ ಸಿದ್ದತಾ ಕೆಲಸ ಮಾಡಿದ್ದರು. ಆದರೆ ಮೂರ್ನಾಲ್ಕು ಬಾರಿ ಮುಂದೂಡಿಕೊಂಡು ಬಂದರು. ಈಗ ಏ.24ರಂದು ಸಭೆ ನಡೆಸಲು ದಿನಾಂಕ ನಿಗದಿಯಾಗಿದೆ. ಅದರಂತೆ ಸರ್ಕಾರ ನಡೆದುಕೊಳ್ಳಬೇಕು. ಚಾಮರಾಜನಗರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರ ಹಲವಾರು ಬೇಡಿಕೆಗಳಿಗೆ ಈಡೇರಿಸಬೇಕು ಎಂದು ಆಗ್ರಹಿಸಿದರು.





