ಕೊಳ್ಳೇಗಾಲ : ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಮಂಗಳವಾರ ಸಂಜೆ ಆರು ವರ್ಷದ ಮಗುವೊಂದು ಕೆರೆಯಲ್ಲಿ ಮುಳುಗಿ ಮೃತಪಟ್ಟಿದೆ.
ಗ್ರಾಮದ ಮಹಮ್ಮದ್ ನವಾಜ್ ಎನ್ನುವರ ಪುತ್ರ ಮಹಮ್ಮದ್ ಅರ್ಹನ್ (6) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ.
ಗ್ರಾಮದ ಮಠದ ಬಳಿಯ ಕೆರೆಯಲ್ಲಿರುವ ಮೀನು ನೋಡಲು ನಾಲ್ಕು ಮಕ್ಕಳು ಜೊತೆ ತೆರಳಿದ್ದ ವೇಳೆ ಅರ್ಹನ್ ಕೆರೆಗೆ ಬಿದ್ದು ಮುಳುಗಿ ಸಾವನ್ನಪ್ಪಿದೆ.
ಸ್ಥಳಕ್ಕೆ ಗ್ರಾಮಾಂತರ ಪಿಎಸ್ಐ ಸುಪ್ರೀತ್ ಭೇಟಿ ನೀಡಿ ಪರಿಶೀಲಿಸಿ ಮೃತ್ತದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ತಂದಿರಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ವಹಿಸಿದ್ದಾರೆ.





