Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

“ಚುನಾವಣಾ ಪರ್ವ-ದೇಶದ ಗರ್ವ” ಘೋಷವಾಕ್ಯವುಳ್ಳ ಸೀರೆಯುಟ್ಟು ಮತದಾನ ಮಾಡಿದ ಶಿಲ್ಪಾನಾಗ್‌

ಚಾಮರಾಜನಗರ: ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಚಾಮರಾಜನಗರ ಪಟ್ಟಣದ ಪಿ.ಡಬ್ಲು.ಡಿ ಶಾಲೆ ಮತಗಟ್ಟೆ ಸಂಖ್ಯೆ 80 ರಲ್ಲಿ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮತ ಚಲಾಯಿಸಿದರು.

ಚುನಾವಣಾ ಪರ್ವ-ದೇಶದ ಗರ್ವ ಎಂಬ ಘೋಷವಾಕ್ಯವುಳ್ಳ ಸೀರೆಯನ್ನುಟ್ಟುಕೊಂಡು ಮತಕಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಆ ಮೂಲಕ ಮತದಾನದ ಮಹತ್ವವನ್ನು ವಿಭಿನ್ನವಾಗಿ ಸಾರಿದ್ದಾರೆ.

ಈ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನವನ್ನು ಕಡ್ಡಾಯವಾಗಿ ಮಾಡಬೇಕೆಂದು ಜಾಗೃತಿಗೊಳಿಸುವ ಉದ್ದೇಶದಿಂದ ಸೀರೆಯಲ್ಲಿ ಮತದಾನ ಜಾಗೃತಿ ಘೋಷ ವಾಕ್ಯಗಳನ್ನು ಮುದ್ರಿಸಿ ಹಂಚಲಾಗಿದೆ ಎಂದು ಅವರು ತಿಳಿಸಿದ್ದರು.

ಚಾಮರಾಜನಗರ ತಾಲೂಕಿನ ಸಣ್ಣೇಗಾಲ ಗ್ರಾಮದಲ್ಲಿ ಮತದಾನ ಮಾಡಿದರು. ಇವರಿಗೆ ಜೊತೆಯಾಗಿ ಉಪಕಾರ್ಯದರ್ಶಿ ಲಕ್ಷ್ಮೀ ಹಾಗೂ ಆಹಾರ ಇಲಾಖೆ ಉಪನಿರ್ದೇಶಕಿ ಸವಿತಾ ಅವರು ರೇಷ್ಮೆ ಸೀರೆ ಧರಿಸಿದ್ದರು. ಅದರಲ್ಲಿ ಚುನಾವಣಾ ಪರ್ವ-ದೇಶದ ಗರ್ವ ಎಂದು ಬರೆಯಲಾಗಿದೆ.

Tags: