Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹನೂರು: ತ.ನಾಡಿಗೆ ಸಾಗಿಸುತ್ತಿದ್ದ ಕರುಗಳ ರಕ್ಷಣೆ

 

ಹನೂರು: ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ವಿವಿಧ ತಳಿಯ ಕರುಗಳನ್ನು ಸಾಗಣೆ ಮಾಡುತ್ತಿದ್ದ ವೇಳೆ ರಾಮಾಪುರ ಪೊಲೀಸರು ದಾಳಿ ನಡೆಸಿ ಕರುಗಳನ್ನು ರಕ್ಷಣೆ ಮಾಡಿದ್ದಾರೆ.

ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆವಿಎನ್ ದೊಡ್ಡಿ ಗ್ರಾಮದ ನಾಗೇಶ್ (26) ಬಂಧಿತ ಆರೋಪಿಯಾಗಿದ್ದಾನೆ.

ಘಟನೆ ವಿವರ: ಹನೂರು ಪಟ್ಟಣದಿಂದ ಅಜ್ಜೀಪುರ ಮಾರ್ಗವಾಗಿ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಕರುಗಳನ್ನು ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಲೋಕೇಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಅಜ್ಜೀಪುರ ಸಮೀಪದ ಕಣಿವೆ ಆಂಜನೇಯ ದೇವಸ್ಥಾನದ ಬಳಿ ಬರುತ್ತಿದ್ದ ಗೂಡ್ಸ್ ವಾಹನವನ್ನು ಪರಿಶೀಲನೆ ನಡೆಸಿದಾಗ ವಿವಿಧ ತಳಿಯ ಹಸುಗಳ ಹದಿಮೂರು ಗಂಡು ಕರುಗಳನ್ನು ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ನಂತರ ವಾಹನ ಸಮೇತ 50,000 ಮೌಲ್ಯದ 13 ಕರುಗಳನ್ನು ರಕ್ಷಿಸಿ ಮೈಸೂರು ಜಿಲ್ಲೆ ಟಿ.ನರಸೀಪುರ ಸಮೀಪ ಕುರುಬೂರು ಗ್ರಾಮದ ಗೋಶಾಲೆಗೆ ಕರುಗಳನ್ನು ಬಿಡಲಾಗಿದೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕ 2020ರ ಅಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾಳಿಯಲ್ಲಿ ಎ ಎಸ್ ಐ ಗುರುಸ್ವಾಮಿ, ಮುಖ್ಯಪೇದೆಗಳಾದ ಚಂದ್ರಶೇಖರ್, ರಂಗಸ್ವಾಮಿ, ಪೇದೆ ಮಹೇಂದ್ರ, ಚಾಲಕ ಶಂಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು

Tags: