Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪೊನ್ನಾಚಿ ಗ್ರಾ.ಪಂ ವ್ಯಾಪ್ತಿಯ ಹಸುಗಳಿಗೆ ಗಂಟುರೋಗ : ರೈತರಲ್ಲಿ ಆತಂಕ

ಹನೂರು: ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹಸುಗಳಿಗೆ ಗಂಟುರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ಕಳೆದ ಒಂದು ವಾರದ ಹಿಂದೆ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕೆ ಹೊಲದ ತಂಗವೇಲು ಎಂಬುವರು ಹಸುಗಳಿಗೆ ಗಂಟು ರೋಗ ಕಾಣಿಸಿಕೊಂಡು 1ಹಸು ಮೃತಪಟ್ಟಿದೆ. ಇದೀಗ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 20 ಹೆಚ್ಚು ಹಸುಗಳಿಗೆ ಗಂಟುರೋಗ ಅಂಟಿಕೊಂಡಿರುವುದರಿಂದ ರೈತಾಪಿ ವರ್ಗದವರು ಹಾಗೂ ಹೈನುಗಾರಿಕೆಯನ್ನು ನಂಬಿರುವ ರೈತರ ಜೀವನಕ್ಕೆ ಸಿಡಿಲು ಬಡಿದಂತಾಗಿದೆ.
ಹಸುಗಳ ಚರ್ಮದ ಮೇಲೆ ಗಂಟು ಕಟ್ಟುವುದರಿಂದ ನೊಣಗಳು ಹಸುವಿನ ಚರ್ಮದ ಮೇಲೆ ಕುಳಿತು ಗಾಯಗೊಳಿಸುತ್ತಿದೆ .ಇದೇ ನೊಣಗಳು ಇತರ ಹಸುವಿನ ಮೇಲೆ ಹೋಗಿ ಕುಳಿತಾಗ ಆ ಹಸುಗಳಿಗೂ ಗಂಟು ರೋಗ ಹರಡುತ್ತಿದೆ. ಆದ್ದರಿಂದ ಸಂಬಂಧಪಟ್ಟ ಪಶು ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಸಮಸ್ಯೆಯನ್ನು ಬಗೆಹರಿಸುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ಒತ್ತಾಯಿಸಿದ್ದಾರೆ.
ನಮ್ಮ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಟಿ ಧನವನ್ನು ಸಾಕುತ್ತಿದ್ದೇವೆ. ಈಗ ಹಸು ಹಾಗೂ ಎತ್ತುಗಳ ಮೈ ಮೇಲೆ ದಟ್ಟವಾಗಿ ಗಂಟುಗಳು ಕಾಣಿಸಿಕೊಂಡಿದೆ.ಈ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಅಪಾರ ನಷ್ಟ ಉಂಟಾಗುತ್ತದೆ ಎಂದು ರೈತ ಸದಾಶಿವಪ್ಪ ಆಂದೋಲನಕ್ಕೆ ಅಳಲು ತೋಡಿಕೊಂಡರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ