Mysore
27
overcast clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಹೆದ್ದಾರಿ ತಡೆದು ಪ್ರತಿಭಟನೆ : ಬಂಡೀಪುರ ರಾತ್ರಿ ಸಂಚಾರ ತೆರವು ಮಾಡದಂತೆ ಆಗ್ರಹ

ಚಾಮರಾಜನಗರ : ವಯನಾಡು ಸಂಸದೆ ಪ್ರಿಯಾಂಕ ವಾದ್ರಾ ಅವರು ಬಂಡೀಪುರ ರಾತ್ರಿ ಸಂಚಾರ ನಿಷೇಧ ಮುಕ್ತ ಮಾಡುವುದಾಗಿ ಹೇಳಿರುವುದು ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸುವ ಆಲೋಚನೆ ಮಾಡಲಾಗುತ್ತಿದೆ ಎಂದಿರುವುದರ ವಿರುದ್ಧ ಜಿಲ್ಲೆಯ ರೈತರು ಸೋಮವಾರ ಹೆದ್ದಾರಿ ಸಂಚಾರ ತಡೆ ಮಾಡಿ ಪ್ರತಿಭಟನೆ ಮಾಡಿದರು.

ರಾಜ್ಯ ರೈತಸಂಘ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಗರ-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ತಾಲ್ಲೂಕಿನ ಮರಿಯಾಲಹುಂಡಿ ಬಳಿ ಪ್ರತಿಭಟನೆ ನಡೆಸಿದರು.

ನಂಜನಗೂಡು -ನೀಲಂಬೂರು ರೈಲ್ವೆ ಹಳಿ ಪ್ರಸ್ತಾಪವನ್ನು ಕೇಂದ್ರ ಸಚಿವರ ಜೊತೆ ಮಾಡಲಾಗಿದ್ದು ರಾತ್ರಿ ಸಂಚಾರ ನಿಷೇಧ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಈ ಹೊಸ ರೈಲು ಯೋಜನೆ ಮೂಲಕ ಮಾಡಲಾಗುವುದು ಎಂದು ಪ್ರಿಯಾಂಕಾ ಅವರು ಹೇಳಿರುವುದು ಕರ್ನಾಟಕದ ಹಿತವನ್ನು ಬಲಿಕೊಡುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದರು.

ತಮ್ಮ ರಾಜಕೀಯ ಲಾಭಕ್ಕಾಗಿ ಕರ್ನಾಟಕದ ಅದರಲ್ಲೂ ಚಾಮರಾಜನಗರ ಜಿಲ್ಲೆಯ ಪ್ರಕೃತಿಗೆ ಮಾರಕವಾಗಿರುವ ಈ ಪ್ರಸ್ತಾಪ ಮಾಡಿರುವುದು ಪ್ರಿಯಾಂಕವಾದ್ರ ಅವರ ಕರ್ನಾಟಕ ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
.
ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು. ಇದರಿಂದ ಹಗಲು ದರೋಡೆಗೆ ಅನುಮತಿ ಕೊಟ್ಟಂತೆ ಆಗುತ್ತದೆ. ಕಾಡು ಪ್ರಾಣಿಗಳು ಈಗಾಗಲೇ ನಾಡಿಗೆ ಬರುತ್ತಿವೆ. ರಾತ್ರಿ ವಾಹನ ಸಂಚಾರ ನಿಷೇಧ ತೆರವಾದರೆ ಪ್ರಾಣಿಗಳೆಲ್ಲಾ ಬಹುತೇಕ ನಾಡಿನತ್ತ ಬರಲು ಅನುಮತಿ ಸಿಕ್ಕಂತೆ ಆಗುತ್ತದೆ ಎಂದು ಎಚ್ಚರಿಸಿದರು.

ಪ್ರಾಣಿಗಳು ಮತ್ತು ಮಾನವ ಸಂಘರ್ಷವನ್ನು ತಡೆಯುವುದಕ್ಕಾಗಿ ಅವೈಜ್ಞಾನಿಕವಾದಂತಹ ಪ್ರಕೃತಿಗೆ ವಿರುದ್ಧವಾದ ಪ್ರಾಣಿಗಳಿಗೆ ಸಂತಾನ ಹರಣ ಚುಚ್ಚುಮದ್ದು ನೀಡುವ ಪ್ರಸ್ತಾಪವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಡಿದ್ದು ಇದು ಅರಣ್ಯ ಇಲಾಖೆಯ ಬೇಜವಾಬ್ದಾರಿ ತನಕ್ಕೆ ಸಾಕ್ಷಿಯಾಗಿದೆ. ಈ ಪ್ರಸ್ತಾವ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ , ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ , ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ವಳಗೆರೆ ಗಣೇಶ್ , ಮಲೆಯೂರು ಮಹೇಂದ್ರ , ಪ್ರಕಾಶ್ ಗಾಂಧಿ, ಹೊಸಪುರ ಮಾದಪ್ಪ ,ಅಲಳಿಕಟ್ಟೆ ಪ್ರಭುಸ್ವಾಮಿ, ಮಹದೇವಪ್ಪ, ಶ್ರೀಕಂಠ, ನಾಗು. ಮುದ್ದಳ್ಳಿ ಮಧು, ಚಿದಂಬರ, ಬಸವರಾಜು ಉಮೇಶ್ ,ನಾಗರಾಜಪ್ಪ, ಊರ್ದಳ್ಳಿ ರಾಮಣ್ಣ,ರಾಜು ಪುಟ್ಟಮಲ್ಲೆಗೌಡ, ಪ್ರಭುಸ್ವಾಮಿ. ಗುರುವಿನಪುರ ಮೋಹನ್ ಮೊದಲಾದವರು ಭಾಗವಹಿಸಿದ್ದರು.

Tags:
error: Content is protected !!