ಕೊಳ್ಳೇಗಾಲ : ತಾಲ್ಲೂಕಿನ ಉತ್ತಂಬಳ್ಳಿ ಸರ್ಕಲ್‌ನಲ್ಲಿ ಉದಯರಂಗ ಖಾಸಗಿ ಬಸ್ ಮತ್ತು ರಾಜಸ್ಥಾನ ಮೂಲದ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಐವರಿಗೆ ತೀವ್ರ ಗಾಯಗಳಾಗಿರುವ ಘಟನೆ ನಡೆದಿದೆ.
ಕಾರಿನಲ್ಲಿದ್ದ ರಾಜಸ್ಥಾನ ಮೂಲದವರಾದ ಅನಿಲ್ (28), ತನಿಷಾ (17), ಜಯಷ (21),ಅಂಕಿತ್(8), ರಿಂಕಿ (25) ಗಾಯಗೊಂಡವರು. ಗಾಯಾಳುಗಳನ್ನು ಚಾ.ನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಮೈಸೂರಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನ ಮೂಲದ ಕಾರು ಬೆಂಗಳೂರಿನಿಂದ ಊಟಿಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎರಡೂ ವಾಹನಗಳನ್ನು ಜಪ್ತಿ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.





