ಗುಂಡ್ಲುಪೇಟೆ: ಪಟ್ಟಣದ ತಾಯಿ ಮಕ್ಕಳ ಅಸ್ಪತ್ರೆಗೆ ಗುಣಾಂಭ ಟ್ರಸ್ಟ್ ವತಿಯಿಂದ ರಾಜಮಾತೆ ಪ್ರಮೋದಾದೇವಿ ಅವರು 20 ಮಕ್ಕಳ ವಾರ್ಮರ್ ಮತ್ತು ಮಾನಿಟರ್‌ಗಳನ್ನು ಕೊಡುಗೆಯಾಗಿ ನೀಡಿದರು.
ನಂತರ ಮಾತನಾಡಿದ ಅವರು, ತಾಯಿ ಮಕ್ಕಳ ಅನುಕೂಲಕ್ಕಾಗಿಯೇ ನಾವು ಇ ಟ್ರಸ್ಟ್ ಮೂಲಕ ಜನನವಾದ ಮಕ್ಕಳಿಗೆ ಹಾಗೂ ತಾಯಂದಿರಿಗೆ ಅನುಕೂಲವಾಗುವ ಉಪಕರಣಗಳನ್ನು ನೀಡುತ್ತಾ ಬರುತ್ತಿದ್ದೇವೆ. ಗುಂಡ್ಲುಪೇಟೆ ಹಾಗೂ ನಮ್ಮ ಸಂಬಂಧ ಹಳೆಯದು. ಇಲ್ಲಿನ ಸರ್ಕಾರಿ ಅಸ್ಪತ್ರೆಗೆ ಅನುಕೂಲವಾಗಲಿ ಎಂದು ಇವುಗಳನ್ನು ನೀಡುತ್ತಿದ್ದೇವೆ ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಶಾಸಕ ಗಣೇಶ್ ಪ್ರಸಾದ್ ಮಾತನಾಗಿ, ರಾಜಮಾತೆಯವರು ನಮ್ಮ ತಾಲ್ಲೂಕನ್ನು ಗುರುತಿಸಿ ಮಕ್ಕಳಿಗೆ ಅನುಕೂಲವಾಗಲಿ ಎಂದು ವಾರ್ಮರ್ ಮಾನಿಟರ್ ನೀಡಿದ್ದಾರೆ. ಇತಿಹಾಸ ಓದಿದಾಗ ರಾಜರು ಒಂದು ಜಾಗಕ್ಕೆ ಸೀಮಿತವಾಗಿಲ್ಲ. ಹಾಗಾಗಿ ಇಂದಿಗೂ ಅವರ ಸೇವಾ ಕಾರ್ಯ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಅವರು ಸಹಕಾರ ನೀಡಲಿದ್ದಾರೆ. ಜೊತೆಗೆ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ಎಚ್ ಎಸ್ ನಂಜಪ್ಪ, ಪುರಸಭೆ ಅಧ್ಯಕ್ಷ ಮಧುಸೂದನ್, ತಾಲ್ಲೂಕು ಆರೋಗ್ಯಾಧಿಕಾರಿ ಅಲೀಂ ಪಾಷ, ಅಸ್ಪತ್ರೆ ಆಡಳಿತಾಧಿಕಾರಿ ಡಾ.ಮಂಜುನಾಥ್, ಪುರಸಭೆ ಸದಸ್ಯರು, ವೈದ್ಯರುಗಳು ಸೇರಿದಂತೆ ಹಲವಾರು ಸಾರ್ವಜನಿಕರು ಹಾಜರಿದ್ದರು.





