Mysore
78
overcast clouds

Social Media

ಗುರುವಾರ, 09 ಏಪ್ರಿಲ 2026
Light
Dark

ಶಾಲಾ ಮಕ್ಕಳಿಗೆ ಕಳಪೆ ಊಟ ; ಮುಖ್ಯ ಶಿಕ್ಷಕಿ ಅಮಾನತ್ತು

ಕೊಳ್ಳೇಗಾಲ : ತಾಲ್ಲೂಕಿನ ಸತ್ತೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕಳಪೆ ಊಟ ನೀಡಿದ್ದ ಆರೋಪದ ಮೇಲೆ ಮುಖ್ಯ ಶಿಕ್ಷಕಿ ಹೂವಮ್ಮ ಎಂಬುವವರನ್ನು ಚಾ.ನಗರ ಡಿಡಿಪಿಐ ಎಸ್.ಚಂದ್ರಪಾಟೀಲ್ ಅಮಾನತ್ತುಗೊಳಿಸಿದ್ದಾರೆ.

ಗ್ರಾಮಸ್ಥರ ದೂರಿನ ಮೇರೆಗೆ ಕೊಳ್ಳೇಗಾಲ ಶಿಕ್ಷಣಾಧಿಕಾರಿ ಎಂ.ಮಂಜುಳಾ ರವರಿಗೆ ಆರೋಪದ ಮೇರೆಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿತ್ತು. ಇವರು ಕೊಟ್ಟ ಸಮಜಾಯಿಷಿಯಲ್ಲಿ ಸತ್ಯಕ್ಕೆ ದೂರವಾದ್ದದು ಕಂಡು ಬಂದದ್ದರಿಂದ ಅಕ್ಷರ ದಾಸೋಹ ಯೋಜನಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ಮೂರು ಮಂದಿ ಸದಸ್ಯರು ಸಮಿತಿಯನ್ನು ರಚಿಸಿ ದಾಸ್ತಾನು ತನಿಖೆಗೆ ಒಳಪಡಿಸಿದಾಗ ದವಸಧಾನ್ಯಗಳಲ್ಲಿ ಹುಳು ಮಿಸ್ರಿತವಾಗಿದ್ದು ಕಂಡು ಬಂತು. ಸಾರ್ವಜನಿಕರ ದೂರಿದ್ದ ಆರೋಪ ಸಾಬೀತು ಆದ್ದರಿಂದ ಡಿಡಿಪಿಐ ಅವರು ಈ ಕ್ರಮಕೈಗೊಂಡಿದ್ದಾರೆ.

ಡಿಡಿಪಿಐ ಕ್ರಮಕ್ಕೆ ಸತ್ತೇಗಾಲದ ಶಾಲಾ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಮುಂದೆಯಾಗದಂತೆ ಕ್ರಮಕೈಗೊಳ್ಳುವಂತದ ಒತ್ತಾಯಿಸಿದ್ದಾರೆ.

Tags:
error: Content is protected !!