Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನಕ್ಕೆ ಒಂದು ಸಾವಿರ ತಟ್ಟೆ ಹಸ್ತಾಂತರ

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನಕ್ಕೆ ಮೈಸೂರಿನ ಕೆಜಿ ಕೊಪ್ಪಲು ಗ್ರಾಮದ ಶಿವುರವರು ಒಂದು ಸಾವಿರ ತಟ್ಟೆಯನ್ನು ಪ್ರಾಧಿಕಾರದ ಕಾರ್ಯದರ್ಶಿ ರಘುರವರಿಗೆ ಹಸ್ತಾಂತರ ಮಾಡಿದರು.

ಪ್ರಾಧಿಕಾರದ ಕಾರ್ಯದರ್ಶಿ ರಘು ಮಾತನಾಡಿ, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ನೂರಾರು ದಾನಿಗಳು ಅವರದ್ದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಹಲವಾರು ಉದ್ಯಮಿಗಳು, ಗುತ್ತಿಗೆದಾರರು ವಿವಿಧ ಬಗೆಯ ಸಹಕಾರ ನೀಡಿದ್ದಾರೆ. ಯುವ ಉದ್ಯಮಿ ಶಿವುರವರು ತಟ್ಟೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರಿಂದ ಬರುವ ಆದಾಯ ಹಾಗೂ ದಾನಿಗಳ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಯುವ ಉದ್ಯಮಿ ಶಿವು ಮಾತನಾಡಿ, ತಾಲೂಕಿನ ಧಾರ್ಮಿಕ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಜಾತ್ರಾ ಮಹೋತ್ಸವ ಸಂದರ್ಭಗಳಲ್ಲಿ ಲಕ್ಷಾಂತರ ಜನರು ಹಾಗೂ ದಿನನಿತ್ಯ ಸಾವಿರಾರು ಮಂದಿ ದಾಸೋಹ ಭವನಕ್ಕೆ ಆಗಮಿಸುವ ಹಿನ್ನೆಲೆ ನಮ್ಮ ಕುಟುಂಬದ ವತಿಯಿಂದ ಜನರ ಅನುಕೂಲಕ್ಕಾಗಿ 1 ಸಾವಿರ ತಟ್ಟೆಯನ್ನು ಹರಕೆ ರೂಪದಲ್ಲಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರ ಸಹಯೋಗದೊಂದಿಗೆ 5 ಸಾವಿರ ತಟ್ಟೆ ನೀಡಲು ತಯಾರಿ ಮಾಡಿಕೊಂಡಿದ್ದೇವೆ ಎಂದರು.

ಇನ್ನು ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಉಮಾ ಹೆಸರಿನ ಆನೆಗೆ ಸ್ವಚ್ಛ (ಸ್ಥಾನ)ಮಾಡಲು ವಿನೂತನ ಮಾದರಿಯ ಯಂತ್ರವೊಂದನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರಕ್ಕೆ ನಮ್ಮ ಕೈಲಾಗುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಈ ವೇಳೆ ಮೈಸೂರಿನ ಕೆ.ಜಿ ಕೊಪ್ಪಲಿನ ಮುಖಂಡರುಗಳು ಹಾಜರಿದ್ದರು.

Tags: