ಚಾಮರಾಜನಗರ: ನಗರ ಹಾಗೂ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಚಿತ್ರೀಕರಿಸಿರುವ ಮತ್ತು ಜಿಲ್ಲೆಯ ಕಲಾವಿದರನ್ನು ಹಾಕಿಕೊಂಡು ಜೆಆರ್‌ಕೆ ವಿಷನ್ ಸಂಸ್ಥೆ ನಿರ್ಮಿಸಿರುವ ‘ಚಿರತೆ ಬಂತು ಚಿರತೆೞ ಸಿನಿಮಾವು ಏ.೧೯ ರಂದು ಬಿಡುಗಡೆ ಆಗಲಿದೆ ಎಂದು ನಿರ್ದೇಶಕರಾದ ಬೆನಕ ಕೃಷ್ಣಮೂರ್ತಿ ತಿಳಿಸಿದರು.
ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ಅರಕಲವಾಡಿ, ಕಟ್ನವಾಡಿ, ಕೊಂಗಳ್ಳಿ ಬೆಟ್ಟ, ಕೊತ್ತಲವಾಡಿ ಗ್ರಾಮಗಳ ಸುತ್ತಮುತ್ತ, ಚಾಮರಾಜನಗರದಲ್ಲಿ ಚಿತ್ರೀಕರಿಸಲಾಗಿದೆ.
ಚಿರತೆಯ ಗ್ರಾಮಗಳಿಗೆ ದಾಳಿಯಿಡುವುದು ನಂತರ ನಡೆಯುವ ಬೆಳವಣಿಗೆಗಳ ಕುರಿತ ಕಥಾವಸ್ತು ಒಳಗೊಂಡ ಸಿನಿವಾ ಇದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿನಿವಾದಲ್ಲಿ ಜಿಲ್ಲೆಯ ಸ್ಥಳೀಯ ಭಾಷೆ ಬಳಸಿಕೊಳ್ಳಲಾಗಿದೆ. ನಟರಾದ ಸುಂದರ್ ವೀಣಾ, ಮೇಕಪ್ಪ ರಾಮಕೃಷ್ಣ, ಗಿರಿಶಿವಣ್ಣ, ವನಿತಾ, ಸುಜಾತ, ಎ.ಡಿ.ಸಿಲ್ವಾ, ಕೆ.ವೆಂಕಟರಾಜು, ಕಿರಣ್ ಗಿರ್ಗಿ, ಮಹಾಲಿಂಗ ಗಿರ್ಗಿ ಇತರರು ನಟಿಸಿದ್ದಾರೆ. ಎಂದು ತಿಳಿಸಿದರು.
ಈ ಸಿನಿವಾದ ನಾುಂಕ ಪಾರ್ಥಪ್ಪ ಸರ್ಕಾರಿ ನೌಕರಿ ಬಿಟ್ಟು ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿರುತ್ತಾನೆ.
ಗ್ರಾಮದ ಮುಖಂಡ ವಾದಪ್ಪನ ಎತ್ತಿನ ಮೇಲೆ ಚಿರತೆ ದಾಳಿ ವಾಡಿ ಗಾಯಗೊಳಿಸುತ್ತದೆ. ಪಾರ್ಥಪ್ಪನ ಬಳಿಯಿದ್ದ ಪರವಾನಗಿ ಪಡೆದಿರುವ ಬಂದೂಕಿನಿಂದ ಚಿರತೆ ಕೊಲ್ಲಬೇಕು ಎಂದು ವಾದಪ್ಪ ಒತ್ತಾಯ ಮಾಡುತ್ತಾನೆ. ಆದರೆ, ವನ್ಯಪ್ರಾಣಿ ಸಂರಕ್ಷಣಾ ಕಾನೂನು ಅರಿವು ಇರುವ ಪಾರ್ಥಪ್ಪ ಚಿರತೆ ಹತ್ಯೆಗೆ ಒಪ್ಪುವುದಿಲ್ಲ.
ಆಗ ಇಡೀ ಗ್ರಾಮ ಚಿರತೆುಂನ್ನು ಹತ್ಯೆ ವಾಡಬೇಕೆಂದು ಪಾರ್ಥಪ್ಪನ ಮೇಲೆ ಒತ್ತಡ ಹೇರುತ್ತಾರೆ. ಚಿರತೆಯನ್ನು ಸಾಯಿಸಲಾಗುವುದೇ ಅಥವಾ ಬದುಕಿಸಲಾಗುವುದೇ ಎಂಬುದು ಸಿನಿವಾದ ಕ್ಲೈವ್ಯಾಕ್ಸ್ ಆಗಿದೆ ಎಂದು ತಿಳಿಸಿದರು.
ನಿರ್ಮಾಪಕ ಜಗದೀಶ್ ಮಲ್ನಾಡ್, ರಂಗಕರ್ಮಿ ಕೆ.ವೆಂಕಟರಾಜು, ಕಲಾವಿದರಾದ ಎ.ಡಿ.ಸಿಲ್ವಾ, ಕಿರಣ್ ಗಿರ್ಗಿ, ಮಹಾಲಿಂಗಗಿರ್ಗಿ ಹಾಜರಿದ್ದರು.