ಚಾಮರಾಜನಗರ: ಅಕ್ಟೋಬರ್.7, 8 ಹಾಗೂ 9ರಂದು ಚಾಮರಾಜನಗರದಲ್ಲಿ ದಸರಾ ಮಹೋತ್ಸವ ನಡೆಯಲಿದೆ.
ಜಾನಪದ ಕಲೆಗಳ ತವರೂರಾದ ಚಾಮರಾಜನಗರದಲ್ಲಿ ಈ ಬಾರಿ ಬರೋಬ್ಬರಿ ಎರಡು ಕೋಟಿ ವೆಚ್ಚದಲ್ಲಿ ದಸರಾ ಹಬ್ಬವನ್ನು ಆಚರಿಸಲು ಚಾಮರಾಜನಗರ ಜಿಲ್ಲಾಡಳಿತ ಮುಂದಾಗಿದೆ.
ಈ ಬಾರಿ ಭುವನೇಶ್ವರಿ ವೃತ್ತದಿಂದ ರಾಮಸಮುದ್ರದವರೆಗೂ ಬರೋಬ್ಬರಿ 15 ಲಕ್ಷ ಕಲರ್ ಫುಲ್ ಲೈಟಿಂಗ್ ಮಾಡಲಾಗಿದೆ. ಈ ಬಾರಿ ಗಜಪಡೆಯನ್ನು ಕರೆತಂದು ಮೈಸೂರು ದಸರಾ ಜಂಬೂಸವಾರಿ ಮಾದರಿಯಲ್ಲೇ ಈ ಬಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಜಿಲ್ಲಾಡಳಿತ ತಯಾರಿ ನಡೆಸಿದೆ.
ಚಾಮರಾಜನಗರ ಜಾನಪದ ಕಲೆಗಳ ತವರೂರು. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, 60 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.
ಈ ಬಾರಿಯ ದಸರಾಗೆ ನಟ ಶಿವರಾಜ್ ಕುಮಾರ್ ಅವರನ್ನು ಕರೆತರಲು ನಿರ್ಧರಿಸಲಾಗಿದೆ. ಈ ಬಾರಿ ಅದ್ಧೂರಿ ದಸರಾ ಆಚರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಜನತೆಯ ಮೊಗದಲ್ಲಿ ಮಂದಹಾಸ ಮನೆಮಾಡಿದೆ.