ಮಹಾದೇಶ್ ಎಂ ಗೌಡ
ಹನೂರು: ನಂಜದೇವನಪುರ ಗ್ರಾಮದಲ್ಲಿ ಸೆರೆಹಿಡಿದಿರುವ ಹುಲಿ ಮರಿಗಳನ್ನು ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬಿಡದಂತೆ ಸಂಸದ ಸುನೀಲ್ ಬೋಸ್ ಅವರು ಡಿಸಿಎಫ್ ಭಾಸ್ಕರ್ ಅವರಿಗೆ ಸೂಚನೆ ನೀಡಿದರು.
ಚಾಮರಾಜನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಸೆರೆಹಿಡಿದಿರುವ ಹುಲಿಗಳನ್ನು ಬಿಆರ್‌ಟಿ ವಲಯ ವ್ಯಾಪ್ತಿಯಲ್ಲಿ ಬಿಡುತ್ತಿದ್ದಾರೆ ಎಂದು ಆದಿವಾಸಿ ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಧ್ಯಮದವರು ಸಂಸದರ ಗಮನಕ್ಕೆ ತಂದು ಸಾಧಕ ಬಾದಕಗಳ ಬಗ್ಗೆ ಚರ್ಚೆ ನಡೆಸಿದರು.
ಈ ವೇಳೆ ಸಂಸದ ಸುನಿಲ್ ಬೋಸ್ ಅವರು ಸ್ಥಳದಲ್ಲಿಯೇ ಬಿಆರ್‌ಟಿ ಪ್ರಬಾರ ಡಿಸಿಎಫ್ ಭಾಸ್ಕರ್ ಅವರಿಗೆ ದೂರವಾಣಿ ಮುಖಾಂತರ ಮಾತನಾಡಿ ನಂಜದೇವನಪುರ ಗ್ರಾಮ ವ್ಯಾಪ್ತಿಯಲ್ಲಿ ಸೆರೆಹಿಡೆದಿರುವ ಹುಲಿಗಳನ್ನು ಬಿಆರ್‌ಟಿ ವಲಯದ ದೊಡ್ಡಸಂಪಿಗೆ ಅರಣ್ಯ ಪ್ರದೇಶದಲ್ಲಿ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬಿಡಕೂಡದು. ಈಗಾಗಲೇ ಕಾಡುಪ್ರಾಣಿಗಳ ಹಾವಳಿಯಿಂದ ಈ ಭಾಗದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೆ ಬೇರೆಡೆಯಿಂದ ಹುಲಿಗಳನ್ನು ತಂದುಬಿಟ್ಟರೆ ಮತ್ತಷ್ಟು ಸಮಸ್ಯೆ ಉಂಟಾಗುತ್ತದೆ. ಕಳೆದ ತಿಂಗಳು ಆನೆ ದಾಳಿಯಿಂದ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಆದಿವಾಸಿ ಸಮುದಾಯದ ಮುಖಂಡರು ಮೃತಪಟ್ಟಿದ್ದಾರೆ. ಈ ಸಂಬಂಧ ಹುಲಿಗಳನ್ನು ಬೇರೆ ಕಡೆ ಬಿಡುವಂತೆ ಸೂಚನೆ ನೀಡಿದರು.
ಇನ್ನು ಚಾಮರಾಜನಗರ ತಾಲ್ಲೂಕಿನ ನಂಜದೇವನಪುರ ಗ್ರಾಮದಲ್ಲಿ 5 ಹುಲಿಗಳು ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಬಗ್ಗೆ ರೈತ ಮುಖಂಡರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಕಾಡು ಪ್ರಾಣಿಗಳ ಹಾವಳಿಗೆ ಯಾವ ಕ್ರಮ ಕೈಗೊಂಡಿದ್ದೀರಾ? 5 ಹುಲಿಗಳ ಪೈಕಿ ಇನ್ನು ಎರಡು ಹುಲಿಗಳನ್ನು ಯಾವಾಗ ಸೆರೆ ಹಿಡಿದು ಗ್ರಾಮಸ್ಥರ ಆತಂಕವನ್ನು ದೂರ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಭಾಸ್ಕರ್ ಈಗಾಗಲೇ ತಾಯಿ ಮತ್ತು ಎರಡು ಮರಿ ಹುಲಿಗಳನ್ನು ಸೆರೆ ಹಿಡಿಯಲಾಗಿದ್ದು, ಕಾರ್ಯಚರಣೆ ಮುಂದುವರಿದಿದೆ. ಅತಿ ಶೀಘ್ರದಲ್ಲಿ ಹುಲಿಗಳನ್ನು ಸೆರೆ ಹಿಡಿದು ರೈತರ ಆತಂಕವನ್ನು ಹೋಗಲಾಡಿಸುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಕಾರ್ಯದರ್ಶಿ, ಗೌಡಳ್ಳಿ ರಾಜೇಶ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ಸಂಸದರ ಆಪ್ತ ಸಹಾಯಕರಾದ ಜಗದೀಶ್, ಸಂತೋಷ್ ಯುವ ಮುಖಂಡರಾದ ಕೆಂಪರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.





