Mysore
25
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಸಂಸದ ಶ್ರೀನಿವಾಸ್‌ ಪ್ರಸಾದ್‌ ಅವರು ಒಳ್ಳೇಯದಾಗಲಿ ಎಂದು ಹರಸಿದ್ದಾರೆ: ಸುನೀಲ್‌ ಬೋಸ್‌

ಮೈಸೂರು: ಲೋಕಸಭಾ ಚುನಾವಣೆಗೆ ತಡವಾಗಿ ಟಿಕೆಟ್‌ ಸಿಕ್ಕಿದ್ದಕ್ಕೆ ಯಾವುದೇ ಬೇಸರವಿಲ್ಲ. ನಮ್ಮ ರೀತಿಯಲ್ಲಿಯೇ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿನ ಪ್ರಮಾಣದಲ್ಲಿರುತ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಟಿಕೆಟ್‌ ಸಿಗಲಿದೆ ಎಂಬ ವಿಶ್ವಾಸವಿತ್ತು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಹೇಳಿದ್ದಾರೆ.

ನಾನು ರಾಜಕಾರಣಕ್ಕೆ ಅಪರಿಚಿತನೇನೂ ಅಲ್ಲ ಮೂರು ಲೋಕಸಭಾ, ಮೂರು ವಿಧಾನ ಪರಿಷತ್ ಮತ್ತು ನಮ್ಮ ತಂದೆಯ ನಾಲ್ಕು ವಿಧಾನಸಭಾ ಚುನಾವಣೆ ಮಾಡಿರುವ ಅನುಭವ ನನಗಿದೆ ಎಂದರು.

ಚಾಮರಾಜನಗರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದನ್ನು ಉಲ್ಲೇಖಿಸಿದ ಸುನೀಲ್, ರಾಜಕಾರಣ ಯಾವತ್ತಿಗೂ ನಿಂತ ನೀರಲ್ಲ, ಪ್ರಸಾದ್ ಅವರನ್ನು ನಮ್ಮ ಬಾಲ್ಯದಿಂದ ನೋಡುತ್ತಾ ಬೆಳೆದಿದ್ದೇವೆ. ತನ್ನ ತಂದೆಯವರಿಗಾಗಲೀ ಅಥವಾ ತನಗಾಗಲೀ ಅವರ ವಿರುದ್ಧ ವೈಯಕ್ತಿಕವಾಗಿ ಏನೂ ವೈರತ್ವವಿಲ್ಲ. ಸಿದ್ದಾಂತ ಎಂದು ಬಂದಾಗ ನಾವು ವಿರೋಧಿಗಳಾಗಿದ್ದೇವೆ ಎಂದು ಹೇಳಿದರು.

50 ವರ್ಷಗಳ ಕಾಲ ಸುದೀರ್ಘ ರಾಜಕಾರಣ ಬಳಿಕ ನಿವೃತ್ತಿ ಘೋಷಿಸಿರುವ ಪ್ರಸಾದ್ ಅವರು ನನಗೆ ಒಳ್ಳೆಯದಾಗಲಿ ಅಂತ ಹರಸಿ ಕಳಿಸಿದ್ದಾರೆ ಎಂದು ಟಿವಿ9 ಜೊತೆ ಮಾತನಾಡುವಾಗ ಸುನೀಲ್‌ ಬೋಸ್‌ ಮಾಹಿತಿ ಹಂಚಿಕೊಂಡಿದ್ದಾರೆ.

Tags:
error: Content is protected !!