ಹನೂರು: ತಾಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳವಾದ ಮಲೆಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಪುರದ ಮೇಲೆ ಏರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನೆಡೆದಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಮೂಲದ ಮೃತ್ಯುಂಜಯ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.
ಶ್ರೀ ಕ್ಷೇತ್ರದ ಮಾದಪ್ಪ ದೇವಾಲಯದ ಗೋಪುರ ಏರಿದ ಆತನನ್ನು ನೆರೆದಿದ್ದ ಭಕ್ತ ಸಮೂಹ ಕೆಳಗಿಳಿಯುವಂತೆ ಕೇಳಿಕೊಂಡರು ಯಾವುದಕ್ಕೂ ಕಿವಿಗೊಡದೆ ಗೋಪುರದ ಮೇಲೆ ಮೇಲೆ ಏರುತಿದ್ದ.ಈ ಬಗ್ಗೆ ಮಾಹಿತಿ ತಿಳಿದ ಮಹದೇಶ್ವರಬೆಟ್ಟ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನೆರೆದಿದ್ದ ಭಕ್ತರ ಸಹಕಾರದೊಂದಿಗೆ ಆತನನ್ನು ಮನವೊಲಿಸಿ ಕೆಳಗಿಸುವಲ್ಲಿ
ಯಶಸ್ವಿಯಾಗಿದ್ದಾರೆ.
ಈ ವೇಳೆ ವ್ಯಕ್ತಿ ಪಂಚೆ ಬಿಟ್ಟರೆ ಮೈಮೇಲೆ ಮತ್ಯಾವ ಬಟ್ಟೆ ಇಲ್ಲದೆ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದ ಎನ್ನಲಾಗಿದೆ. ನಂತರ ಪೊಲೀಸರೇ ಬಟ್ಟೆ ಕೊಡಿಸಿ, ಬಸ್ ಚಾರ್ಜ್ ಗೆ ಹಣ ನೀಡಿ ಗ್ರಾಮಕ್ಕೆ ವಾಪಸ್ ಕಳಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಲಿ, ಜೀವನದಲ್ಲಿ ಜಿಗಪ್ಸೆ ಹೊಂದಿದವರಾಗಲಿ, ಮಲೆ ಮಹದೇಶ್ವರ ಬೆಟ್ಟದ ರಾಜಗೋಪುರ ಹಾಗೂ ಇನ್ನಿತರ ಗೋಪುರಗಳಿಗೆ ಹೇರಿ ಹುಚ್ಛಾಟ ಮೆರೆಯಬಾರದು.ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಈಡೇರಿಸುವಂತೆ ಕೋರಿಕೆ ಮಾಡಲು ಬರುವುದು ವಾಡಿಕೆ ಅದರಂತೆ ಮಾದಪ್ಪನ ಬೆಟ್ಟಕ್ಕೆ ಕೆಟ್ಟ ಹೆಸರು ತರಬಾರದು ಎಂದು ಪೊನ್ನಾಚಿ ಸ್ನೇಹಜೀವಿ ರಾಜು ಮನವಿ ಮಾಡಿದ್ದಾರೆ.