ಚಾಮರಾಜನಗರ: ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಲು ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ದಂಡ ವಿಧಿಸಿ, ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ಮುಚ್ಚಳಿಕೆ ಬರೆಸಿಕೊಂಡಿದೆ.
ನಂಜನಗೂಡಿನ ಬಸವರಾಜು ಎಂಬುವವರಿಗೆ 25 ಸಾವಿರ ರೂ ದಂಡ ಹಾಕಲಾಗಿದೆ. ರಸ್ತೆಯ ಪಕ್ಕದಲ್ಲೇ ನಿಂತಿದ್ದ ಕಾಡಾನೆಯನ್ನು ಕಂಡು ಬಸವರಾಜು ಕಾರಿನಿಂದ ಕೆಳಗಡೆ ಇಳಿದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು.
ಈ ವೇಳೆ ರೊಚ್ಚಿಗೆದ್ದ ಆನೆ ಬಸವರಾಜುರನ್ನು ಅಟ್ಟಾಡಿಸಿ ತುಳಿಯಲು ಯತ್ನಿಸಿತು. ಅದೃಷ್ಟವಶಾತ್ ಸ್ವಲ್ಪದರಲ್ಲೇ ಬಸವರಾಜು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.





